Skip to main content

Posts

ಊರಿನಲ್ಲಿ ತೇರು

ಮುಗುಳು ನಗುವನ ಮಿಗದ ಕಣ್ಣನ
ಮುಗಿಲ ಬಣ್ಣನ ಖಗವನೇರ್ದನ
ತಿಗರಿಯಲಸುರ ದುರುಳರನು ತಾ ಮಡುಹಿ ಕೆಡಹಿದನ
ಮಗುವಿನಂತೆಲ್ಲರನು ಕಾಯ್ವನ
ಜಗವ ನಡೆಸುವ ಕೇಶವೇಶನ
ಸುಗುಣಿಜನರೇಂ ಪುಣ್ಯಗೈದರೊ ತೇರನೆಳೆಯಲಿಕೆ ಜಗವ ಕಾಯುವನಿವನು ನಂಬಿರೊ
ಮಿಗೆ ಸಲಹುವನು ನೆಚ್ಚಿದವರನು
ಹೊಗಳುವರಿನಿತು ಕಾಲದಿಂದಲು ಲಕುಮಿ ಕೇಶವನ
ಬಗೆಯುತಿರಲಿವನನ್ನನುದಿನದೊ
ಳಗಣ ಕಲುಷವು ಪೋಪುದಾಕ್ಷಣ
ಸುಗುಣಿಜನಹಿತ ನೋಳ್ಪವನು ಈ ಕೌಶಿಕೇಶ್ವರನು ಚಿಗುರು ತುಳಸೀ ಮಾಲೆ ಧರಿಸಿದ
ಮುಗಿಲ ಕಾಂತಿಯ ಮೀರುವಾತನು
ಮಿಗಿಲು ತಾ ಮೆರೆಯುತಿರುತಿಹನಿವನೂರ ತೇರಿನಲಿ
ಬಗೆಯಗೊಳ್ಳುವ ತನ್ನ ಚೆಲುವಲಿ
ಹಗುರಗೊಳಿಸೈ ಜೀವ ಭಾರವ
ಹಗೆಗಳಿರದಿರುವಂತೆ ಮಾಡುತ ನಮ್ಮ ಬದುಕಿನಲಿ -ಹಂಸಾನಂದಿ  ಕೊ: ಮಿತ್ರ ಕಲಾವಿದ ಲೋಕೇಶ್ ಆಚಾರ್ಯ ಅವರು ಚಿತ್ರಿಸಿದ ಅವರೂರ ತೇರಿನ ವರ್ಣಚಿತ್ರ ನೋಡಿ ನನಗೆ ನಮ್ಮೂರ ತೇರಿನ ನೆನಪಾಯಿತು. ಆ ನೆನಕೆಯಲ್ಲಿ ಈ ಮೂರು ಭಾಮಿನಿ ಷಟ್ಪದಿಗಳು ಕೊ.ಕೊ: ಬಲಭಾಗದಲ್ಲಿರುವುದು ಹಾಸನ  ಜಿಲ್ಲೆಯ ಕೌಶಿಕ ಎಂಬ ಹಳ್ಳಿಯಲ್ಲಿರುವ ಲಕ್ಷ್ಮೀಕೇಶವ ಮೂರ್ತಿ. ಈ ಪದ್ಯಗಳನ್ನು ಬರೆದಾಗ ಆ ಸುಂದರ ಮೂರ್ತಿಯೇ ಮನಸ್ಸಿನಲ್ಲಿತ್ತು.  ಕೊ.ಕೊ.ಕೊ: ಈ ಮೂರ್ತಿ ಹೊಯ್ಸಳ ಶೈಲಿಯಲ್ಲಿದ್ದರೂ ದೇವಾಲಯದಲ್ಲಿ ಹೊಯ್ಸಳರದ್ದೇ ಎಂದು ಗುರುತಿಸಬಲ್ಲಂತಹ ಇತರ ಕಲೆಗಾರಿಕೆ ಇಲ್ಲ.
Recent posts

ದಿನಕ್ಕೊಂದು ನೆಪ!

ನೆನ್ನೆ ಅಂದರೆ ಮಾರ್ಚ್ ೨೦ (ಕೆಲವೊಮ್ಮೆ ಮಾರ್ಚ್ ೨೧ ರಂದೂ ಬರುತ್ತೆಅನ್ನಿ)  ವಸಂತದ ಮೊದಲ ದಿನ ಅಂತ ಲೆಕ್ಕ. ಅಂದರೆ, ಈಗ ನಾವು ಯಾವುದನ್ನ ಮೇಷಾದಿ ಬಿಂದು ಅಂತ ಆಕಾಶದಲ್ಲಿ ಕರೀತೀವೋ ಆ ಜಾಗದಲ್ಲಿ ಸೂರ್ಯ ಇರ್ತಾನೆ ಅಂತ. ಆದರೆ , ತಮಾಷಿ ಅಂದ್ರೆ ಈ ಬಿಂದು ಈಗ ಮೇಷ ರಾಶಿಯಲ್ಲಿ ಇಲ್ಲ , ಬದಲಿಗೆ ಮೀನ ರಾಶಿಯನ್ನೂ ದಾಟಿ ಹೆಚ್ಚು ಕಡಿಮೆ  ಕುಂಭರಾಶಿಗೆ ಸೇರಿ ಹೋಗಿದೆ. ಹೋಗಲಿ ಬಿಡಿ, ಈಗ ನಾನು ಹೇಳೋಕೆ ಹೊರಟಿದ್ದೇ ಬೇರೆ ವಿಷಯ.

ನಾವು ಚಿಕ್ಕವರಿದ್ದಾಗ ವರ್ಷದಲ್ಲಿ ಹನ್ನೆರಡು ತಿಂಗಳು, ಆರು ಋತುಗಳು ಮೂರು ಕಾಲಗಳು ಅಂತೆಲ್ಲ ಬಾಯಿಪಾಠ ಮಾಡಿದ್ದೇ ಮಾಡಿದ್ದು. ನಮ್ಮೂರಲ್ಲಿ ಮೂರು ಕಾಲಗಳಂತೂ ಕಾಣ್ತಿದ್ದವು,  ಆದರೆ ಋತುಗಳು? ವಸಂತ ? ಹೇಮಂತ?  ಶಿಶಿರ? ಹೂವು ಅರಳೋ ಕಾಲ? ಎಲೆ ಉದುರೋ ಕಾಲ?  ಹೂವುಗಳೇನೋ ಅರಳ್ತಿದ್ದವು ಹೆಚ್ಚು ಕಡಿಮೆ ವರ್ಷ ಪೂರ್ತಿ. ಇನ್ನು ಎಲೆ ಉದುರುತ್ತೆ ಅನ್ನೋದನ್ನ ಪುಸ್ತಕದಲ್ಲಿ ಓದಿ ತಿಳಿದಿದ್ದು ಅಷ್ಟೇ ಬಿಡಿ.

ಅದೇ ರೀತಿ ಆಗ ನಮಗೆ ಗೊತ್ತಿದ್ದದ್ದು ಮಕ್ಕಳ ದಿನಾಚರಣೆ ಒಂದೇ. ಆಮೇಲೆ, ಬೇರೆ ಬೇರೆ ದಿನಗಳ ಪರಿಚಯವಾಗ್ತಾ  ಹೋಯ್ತು.  ಅಪ್ಪನ ದಿನ, ಅಮ್ಮನ ದಿನ ಮೊದಲಾದುವುಗಳೆಲ್ಲ ಗ್ರೀಟಿಂಗ್ ಕಾರ್ಡ್ ಕಂಪನಿಗಳ ಲಾಭ ಹೆಚ್ಚಿಸೋಕೆ ಹೆಚ್ಚು ಹೆಚ್ಚು ಪ್ರಚಾರವಾಗ್ತಾ ಇದೆ ಅನ್ನುವ ಆರೋಪ ಇದ್ದೇ ಇದ್ದರೂ, ಪ್ರತಿ ದಿನವೂ ಅಪ್ಪನ ದಿನ, ಅಮ್ಮನ ದಿನ ಯಾಕಾಗಬಾರದು ಅಂತ ಪ್ರಶ್ನೆ ಕೇಳುವವರು ಹೆಚ್ಚೇ ಇದ್ದರೂ, ಹಾಗೊಂದು ದಿವಸ ಇದ್ರೆ…

ಪಸರಿಸಿತು ಮಧುಮಾಸ

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು 
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು 
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು 

( ಕುಮಾರವ್ಯಾಸ ಭಾರತ, ,  ಆದಿ ಪರ್ವ, ೫ ಸಂಧಿ, ೯ ಪದ್ಯ , ವಸಂತ ವರ್ಣನೆ)-ಹಂಸಾನಂದಿ

ನಲಿವಿನ ಇರುಳು

ಈಚೆಗೆ ಭೈರಪ್ಪನವರ ಉತ್ತರ ಕಾಂಡ ಓದಿದ್ದರ ಪ್ರಭಾವವೋ ಏನೋ, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡವನ್ನೂ , ಮತ್ತೆ ಭವಭೂತಿಯ ಉತ್ತರ ರಾಮ ಚರಿತೆಯನ್ನೂ ಕೊಂಚ ನೋಡುವ ಅವಕಾಶ ಆಯಿತು. ಆ ಸಂದರ್ಭದಲ್ಲೇ ಹಿಂದೊಮ್ಮೆ ಉತ್ತರ ರಾಮ ಚರಿತೆಯ ಒಂದು ಪದ್ಯವನ್ನು ಹಿಂದೊಮ್ಮೆ ಅನುವಾದಿಸಿದ್ದು ನೆನಪಿಗೆ ಬಂತು.  ಅದನ್ನ ಇನ್ನೂ ಸ್ವಲ್ಪ ಚಂದವಾಗಿ ಮಾಡಬಹುದು ಎನ್ನಿಸಿ , ಮಾಡಿದ ಇನ್ನೊಂದು ಪ್ರಯತ್ನ ಇಲ್ಲಿದೆ. 

ಮೆಲ್ಲ ಮೆಲ್ಲನದೇನದೇನನೋ ಮಾತನಾಡುತ ಸುಮ್ಮನೇ
ಗಲ್ಲದಲಿ ಗಲ್ಲವನು ಹಚ್ಚಿರೆ ಸೊಗದ ತಲ್ಲೀನತೆಯಲೇ |
ಉಲ್ಲಸದಲಪ್ಪುಗೆಯ ತೋಳ್ಗಳು ಒಂದುಗೂಡಿರೆ ಕಳೆಯಿತೇ
ಎಲ್ಲೊ ರಾತ್ರಿಯು ತಿಳಿಯದಲೆ ಮತ್ತೊಂದನರಿಯದ ಪರಿಯಲೇ ||
ಸಂಸ್ಕೃತ ಮೂಲ ( ಭವಭೂತಿಯ ಉತ್ತರರಾಮಚರಿತ, ಅಂಕ ೧, ಪದ್ಯ ೨೭)
ಕಿಮಪಿ ಕಿಮಪಿ ಮಂದಂ ಮಂದಮಾಸಕ್ತಿ ಯೋಗಾತ್
ಅವಿರಲಿತ ಕಪೋಲಮ್ ಜಲ್ಪತೋರಕ್ರಮೇಣ |
ಅಶಿಥಿಲ ಪರಿರಂಭ ವ್ಯಾಪೃತೇಕೈಕದೋಷ್ಣೋಃ
ಅವಿದಿತ ಗತಯಾಮಾ ರಾತ್ರಿರೇವ ವ್ಯರಂಸೀತ್ ||
किमपि किमपि मन्दं मन्दमासक्ति योगात्
अविरलित कपोलम् जल्पतोरक्रमेण ।
अशिथिलपरिरंभव्यापृतेकैकदोष्णोः
अविदित गतयामा रात्रिरेव व्यरंसीत् ॥ 
-ಹಂಸಾನಂದಿ
ಚಿತ್ರ : ಬಾಲಿ (ಇಂಡೋನೇಷ್ಯ) ಯ ರಾಮ ಸೀತೆಯರ ಒಂದು ಮರದ ಶಿಲ್ಪ
ಕೊ:   ಮೂಲವು ಮಾಲಿನಿ ಎಂಬ  ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾ ಮಾಲೆಯಲ್ಲಿದೆ. ಓದುವ ಅನುಕೂಲಕ್ಕೆ ಕೆಲವು ವಿಸಂಧಿಗಳನ್ನು ಹಾಗೆಯೇ ಉಳಿಸಿದ್ದೇನ…

ಶಿವ ಶಿವೆಯರ ಸರಸ

ಶಿವರಾತ್ರಿಯ ಹೊತ್ತಿಗೆ (ತುಸು ತಡವಾದರೂ), ಶಿವ ಪಾರ್ವತಿಯರ ಬಗ್ಗೆ ಒಂದು ಪದ್ಯದ ಅನುವಾದ:


ಚಂದಿರನು ಬೂದಿಚದುರಿದ ಜಟೆಯೊಳಹೊಗುವ
ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ
ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ-
ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!
ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ ೬೨)
ಜಟಾಗುಲ್ಮೋತ್ಸಂಗಂ ಪ್ರವಿಶತಿ ಶಶೀ ಭಸ್ಮಗಹನಂ ಫಣೀಂದ್ರೋಽಪಿ  ಸ್ಕಂಧಾದ್ ಅವತರತಿ ಲೀಲಾಂಚಿತಫಣಃ |  ವೃಷಃ ಶಾಠ್ಯಂ ಕೃತ್ವಾ ವಿಲಿಖತಿ ಖುರಾಗ್ರೇಣ ನಯನಂ  ಯದಾ ಶಂಭುಶ್ಚುಂಬತ್ಯಚಲದುಹಿತುರ್ವಕ್ತ್ರ ಕಮಲಂ   ||
जटा-गुल्मोत्सङ्गं प्रविशति शशी भस्म-गहनं
फणीन्द्रोऽपि स्कन्धाद् अवतरति लीलाञ्चित-फणः ।
वृषः शाठ्यं कृत्वा विलिखति खुराग्रेण नयनं
यदा शम्भुश् चुम्बत्यचलदुहितुर् वक्त्र-कमलम् ॥ - ಹಂಸಾನಂದಿ
ಕೊ: ಸಂಸ್ಕೃತ ಪದ್ಯದಲ್ಲಿ ಇರುವ ಲಾಲಿತ್ಯವನ್ನು ಅನುವಾದದಲ್ಲಿ ತರಲು ಕಷ್ಟಸಾಧ್ಯ! 
ಕೊ.ಕೊ: ಮೂಲವು ಶಿಖರಿಣೀ ಎಂಬ ವೃತ್ತದಲ್ಲಿದೆ. ಇದರ ಪ್ರತಿ ಸಾಲುಗಳೂ,  "ನನಾನಾನಾನಾನಾ   ನನನನನನಾ ನಾನನನನಾ"  ಎಂಬಂತೆ ಕೇಳುತ್ತೆ.   ನನ್ನ ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಆದರೆ ಸಾಮಾನ್ಯವಾಗಿ ಈ ಛಂದಸ್ಸಿನಲ್ಲಿ ಇರುವಂತೆ ಎರಡನೇ ಮತ್ತೆ ನಾಲ್ಕನೆ ಸಾಲುಗಳಲ್ಲಿ ಕೊನೆಯಲ್ಲಿ ಕಡಿಮೆ ಅಕ್ಷರವಿಲ್ಲದೆ, ಎಲ್ಲ ಸಾಲುಗಳೂ ಒಂದೇ ಸಮನಾಗಿದೆ.
ಕೊ.ಕೊ.ಕೊ. ಚಿತ್ರ - ಉಮಾ ಮಹೇಶ್ವರ…

ನಂ.3, ಪಂಚವಟಿ`

ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನೀವಿದ್ದರೆ  ತಪ್ಪದೇ ಬನ್ನಿ! ನಿಮ್ಮ ಗೆಳೆಯರಿಗೂ ತಿಳಿಸಿ.

-ಹಂಸಾನಂದಿ

ಮುರಳೀ ರವಳೀ ಹಾಯಿ!

गगनंगगनाकारंसागरःसागरोपमः मुरळीरवमाधुर्यंमुरळीमंदहासवत्
ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ ಮುರಳೀ ರವಮಾಧುರ್ಯಂ ಮುರಳೀ ಮಂದಹಾಸವತ್
ಆಗಸದವಿಸ್ತರಕೆಸಾಟಿಯಾಕಾಶವದು ಕಡಲಿಗೆಣೆಯಾಗುವುದುಕಡಲುಒಂದೆ! ಬಾಲಮುರಳಿಯಗಾನಸುಧೆಯೀವಸವಿಗಂತು ಹಾಯೆನಿಪಈಮೊಗದನಗುವೆಹೋಲಿಕೆಯು!
ಬಾಲಮುರಳೀಕೃಷ್ಣ೨೦ನೇಶತಮಾನದಲ್ಲಿಭಾರತಕಂಡಅತ್ಯದ್ಭುತ