ಪುಣ್ಯದ ಫಲ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗಿರುವ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

ಇದರ ಬಗ್ಗೆ ಒಂದು ಸಂಸ್ಕೃತ ಸುಭಾಷಿತ ಏನು ಹೇಳುತ್ತೆ ನೋಡಿ - ಅನುವಾದ ನನ್ನದು:

ಕಾಡಿನಲಿ ಕಾಳಗದಿ ವೈರಿಗಳ ನಡುವಲ್ಲಿ
ನೀರಿನಲಿ ಬೆಂಕಿಯಲಿ ಕಡಲಲ್ಲಿ ಬೆಟ್ಟದಾ-
ನೆತ್ತಿಯಲಿ ನಿದ್ದೆಯಲಿ ಮತ್ತಿನಲಿ ಮತ್ತಾಯ-
ತಪ್ಪಿದಲಿ ಕಾವವು ಪುಣ್ಯಗಳು ಮುನ್ನಮಾಡಿದವು!

ಮೂಲ:

ವನೇ ರಣೇ ಶತ್ರು ಜಲಾಗ್ನಿಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?