Posts

Showing posts from April, 2008

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

ಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?

ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.

ಮೊದಲಿಗೆ ದೇವತಾಸ್ತುತಿಯೊಂದಿಗೆ, ಕಾರ್ಯಕ್ರಮ ಪ್ರಾರಂಭಿಸೋಣವೇ? ;-)

MLV sings Venkatachalanilayamಈ ಮೇಲೆ ನೀವು ಕೇಳಿದ್ದು ಶ್ರೀಮತಿ ಎಮ್.ಎಲ್.ವಸಂತಕುಮಾರಿಯವರ ಧ್ವನಿಯಲ್ಲಿ ಪುರಂದರ ದಾಸರ ಪ್ರಸಿದ್ಧ ದೇವರನಾಮ ’ವೆಂಕಟಾಚಲನಿಲಯಂ ವೈಕುಂಠ ಪುರವಾಸಂ’. ನೀವು ಊಹಿಸಿ…

ಮರೆಯಲಾರದ ಹಳೆಯ ಕಥೆಗಳು: ರಂಗನಹಳ್ಳಿ ರಾಮ

ಈ ಹಿಂದೆ ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿಗೆ ಬಂದ ಕಥೆ ಮಾಸ್ತಿ ವೆಂಕಟೇಶಯ್ಯಂಗಾರರ ’ರಂಗನಹಳ್ಳಿ ರಾಮ’.

ಈ ಕಥೆ ಬ್ರಿಟಿಷರ ಕಾಲದ್ದು. ಮೈಸೂರು ಪ್ರಾಂತ್ಯದಲ್ಲಿ ಒಂದೂರು ರಂಗನಹಳ್ಳಿ. ಅಲ್ಲಿನ ಹಬ್ಬಗಳಲ್ಲಿ ಕೋಲಾಟವಾಡುವ ರೂಢಿ ಇತ್ತು. ಇಂಥ ಸಮಯಗಳಲ್ಲಿ ಅವರು ಆಡುತ್ತಿದ್ದಿದ್ದು ’ಕಣ್ಣಾಮುಚ್ಚೇ ಕಾಡೇಗೂಡೇ ರಂಗನಹಳ್ಳಿ ರಾಮನಹಾಡೇ’ ಎನ್ನುವ ಹಾಡಿಗೆ. ಹಾಡಿನ ಪೂರ್ತಿ ಅರ್ಥ ಯಾರಿಗೂ ತಿಳಿದಿರಲಿಲ್ಲ. ಆದರೆ, ಅದು ತಮ್ಮೂರಿನ ಬಗ್ಗೆ ಬರೆದ ಹಾಡು ಎಂದು ಕಿವಿಮಾತಿನಿಂದರಿತಿದ್ದರು.

ಆದರೆ, ರಂಗನಹಳ್ಳಿಯಲ್ಲಿದ್ದಿದ್ದು ರಾಮನ ಗುಡಿಯಲ್ಲ. ಬದಲಿಗೆ ರಂಗನಾಥನ ಗುಡಿ. ಹಾಗಾಗಿ ಇದೊಂದು ಒಗಟಾಗಿಹೋಗಿತ್ತು.

ಆಗ ಆ ಸಮಯದಲ್ಲಿ, ಅಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ, ಈ ವಿಷಯದಲ್ಲಿ ಆಸಕ್ತಿ ವಹಿಸಿ, ಈ ಹಾಡಿನ ಒಗಟನ್ನು ಬಿಡಿಸಿದ್ದೇ ಈ ಕತೆಯ ತಿರುಳು. ಟಿಪ್ಪೂ ಸುಲ್ತಾನನ ಕಾಲದಲ್ಲಿ ದೇವಸ್ಥಾನಗಳ ಇರುವಿಕೆಗೇ ತೊಂದರೆ ಬಂದ ಸಂದರ್ಭಗಳಲ್ಲಿ, ದೇವರನ್ನು ರಂಗನಾಥ ಎಂದೋ, ನಂಜುಂಡೇಶ್ವರ ಎಂದೋ ಹೇಳಿ, ಅವುಗಳನ್ನು ಉಳಿಸಿಕೊಳ್ಳುತ್ತಿದ್ದ ಸಂದರ್ಭವಿತ್ತಂತೆ. ಅಂತಹ ಕಾಲದಲ್ಲಿ, ರಾಮನ ಮೂರ್ತಿಯನ್ನು ಮುಚ್ಚಿ, ರಾಮನ ಬೆನ್ನ ಹಿಂದೆ ರಂಗನನ್ನು ಸ್ಥಾಪಿಸಿ ದೇವಸ್ಥಾನವನ್ನು ಉಳಿಸಿದ್ದ ಗ್ರಾಮಸ್ಥರು, ಮುಂದಿನ ಪೀಳಿಗೆಯವರಿಗೆ ಅದನ್ನು ತಿಳಿಸಲು ಈ ಒಗಟಿನಂಥ ಕೋಲಾಟದ ಪದವನ್ನು ಕಟ್ಟಿದ್ದರು.

ಒಗಟನ್ನು ಬಿಡಿಸಿ, ರಾಮನ ಮೂರ್ತಿಯನ…

ಸಿಂಧು ಭೈರವಿ

೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ.

ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವು ಊಹಿಸಿರುತ್ತೀರಿ.

ಕೆ.ಬಾಲಚಂದರ್ ಅವರ ಈ ಚಿತ್ರದ ಸಂಗೀತಕ್ಕೆ ಇಳೈಯರಾಜ ಅವರಿಗೆ ಹಿನ್ನಲೆ ಹಾಡಿಗೆ ಚಿತ್ರಾ ಅವರಿಗೆ, ಮತ್ತೆ ಅತ್ಯುತ್ತಮ ನಟಿ ಎಂದು ಸುಹಾಸಿನಿ ಅವರಿಗೆ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು.

ಒಂದು ರಾಗದ ಹೆಸರಿರುವ ಈ ಚಿತ್ರದಲ್ಲಿ ಸಂಗೀತ ಒಂದು ಪ್ರಧಾನ ಪಾತ್ರ ವಹಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಆದರೆ, ಆಶ್ಚರ್ಯವೆಂದರೆ ಈ ಸಿನಿಮಾದಲ್ಲಿ ಸಿಂಧು ಭೈರವಿ ರಾಗದ ಯಾವುದೂ ಹಾಡಿರಲಿಲ್ಲ.

ಇದೆಲ್ಲ ಇಲ್ಲಿ ಏಕೆ ಗಳಹುತ್ತಿದ್ದೇನೆ?

ಸಿಂಧು ಬೈರವಿ ರಾಗದ ಬಗ್ಗೆ ಬರೆಯೋಣ ಎಂದುಕೊಂಡೆ. ಅದಕ್ಕೆ ಮೊದಲು ಸ್ವಲ್ಪ ಅಸಂಬದ್ಧ ಪೀಠಿಕೆ ಇದಷ್ಟೇ :)

-ಹಂಸಾನಂದಿ

ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು :)?

ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ ರಾಮನವಮಿ ಯಾಕಾದರೂ ಈ ಪರೀಕ್ಷೆಯ ಸಮಯದಲ್ಲಿ ಬರುತ್ತೋ ಅಂತ ಬೈದುಕೊಳ್ಳುತ್ತಿದ್ದೆ. ಯಾವಾಗಲೂ, ಒಳ್ಳೇ ಸಂಗೀತಗಾರರು ಬರುತ್ತಿದ್ದರೆ, ಅದರ ಮರುದಿನವೇ ಪರೀಕ್ಷೆ ಇದ್ದಿರಬೇಕೇ? ಹಾಗಿದ್ದರೂ, ಆದಷ್ಟೂ ತಪ್ಪಿಸದೇ ಹೋಗುತ್ತಿದ್ದವನು ನಾನು. ಅಂದಿನ ದಿನಗಳು ಚೆನ್ನಾಗಿದ್ದವು. ನಮ್ಮ ಊರಿನಲ್ಲಿ ಎಲ್ಲಿ ಸಂಗೀತ ಕಾರ್ಯಕ್ರಮ ನಡೆದರೂ, ಹತ್ತು ನಿಮಿಷಗಳೊಳಗೆ ಅಲ್ಲಿ ಹೋಗಿ ಸೇರಬಹುದಿತ್ತು. ನಾನು ಕೇಳಿದ ಹೆಚ್ಚಿನ ಕಚೇರಿಗಳು ಹೀಗೆ ರಾಮೋತ್ಸವದಲ್ಲಿ (ಅಥವಾ ಗಣೇಶೋತ್ಸವದಲ್ಲಿ) ಕೇಳಿದ್ದವೇ. ಆದರೆ, ಈಗ ಬೆಂಗಳೂರಿನಂತಹ ಊರುಗಳಲ್ಲಂತೂ ಇಂತಹದ್ದೇ ಕಡೆ ನಡೆಯುವ ಕಾರ್ಯಕ್ರಮಕ್ಕೆ ಹೋಗಬೇಕೆಂದರೆ, ಅರ್ಧ ದಿನವೆಲ್ಲ ರಸ್ತೆಯ ಮೇಲೇ ಇರಬಹುದಷ್ಟೆ. ಪುಣ್ಯಕ್ಕೆ ಎಲ್ಲಾ ಕಡೆ ಗುಡಿ ಗೋಪುರವಿದ್ದಲ್ಲೆಲ್ಲ ಒಂದಲ್ಲ ಒಂದು ಸಂಗೀತ ಕಾರ್ಯಕ್ರಮ ನಡೆಯುವುದರಿಂದ, ಆಸಕ್ತರಿಗೆ ಅಂ…

ಕಾಪಾಡುವ ತಾಯಿಯರು

ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು.
ಹೊರಗೆ ಓಡಾಡುವ ಅವಕಾಶ ಕಡಿಮೆಯೇ, ಆದ್ದರಿಂದ ಆ ಊರಿನ ಭಾಷೆ ಇನ್ನೂ ಸರಿಯಾಗಿ ಬರುತ್ತಿದ್ದಿಲ್ಲ ಅವನಿಗೆ. ಪ್ರಯತ್ನವೇನೋ ಇತ್ತು. ಆದರೂ, ಬಾಯಿಬಿಟ್ಟರೆ ಬಣ್ಣಗೇಡೇನೋ ಅನ್ನುವ ಕಳವಳ. ಯಾರಾದರೂ ನಕ್ಕರೆ? ಅದಕ್ಕೆ ಬರುವ ಮಾತನ್ನೂ ಆಡದೆ ಇಂಗ್ಲಿಷ್ ಮೊರೆ ಹೋಗುತ್ತಿದ್ದಿದ್ದೇ ಹೆಚ್ಚು.

ಅಷ್ಟರಲ್ಲಿ ನ್ಯಾಯ ಮಂಡಲಿಯ ಮಧ್ಯಂತರ ತೀರ್ಪು ಹೊರಬಿದ್ದಿತ್ತು. ಜನರೆ ಸಹನೆಯ ಕಟ್ಟೆಯೂ ಒಡೆದಿತ್ತೇನೋ. ಊರಿನಲ್ಲೆಲ್ಲ ಗಲಭೆಯಂತೆ. ಬಸ್ ಗಳಿಗೆ ಕಲ್ಲು ಬಿದ್ದವೆಷ್ಟೋ. ಗಾಜುಗಳು ಒಡೆದವೆಷ್ಟೋ. ರಸ್ತೆ ತಡೆಯೂ ಆಯಿತು. ಹನಿ ಹನಿ ನೀರಿಗಾಗಿ, ಬವಣೆ ಪಟ್ಟಿದ್ದ ಅವನಿಗೆ, ಈ ಗಲಭೆಗಳ ಹಿಂದೆ ಇರುವ ಆಕ್ರೋಶ ಅರ್ಥವಾಗಿತ್ತು. ಆದರೂ, ಅದು ಸರಿಯೇ ತಪ್ಪೇ? ಅಷ್ಟರಲ್ಲಿ, ಯಾರೋ ಪಾಪದವರ ಮೇಲೂ ಹಲ್ಲೆಯಾಯಿತಂತೆ. ಇದೆಲ್ಲ ಕೇಳಿದ ಇಲ್ಲಿನವರು ಸುಮ್ಮನಿರುತ್ತಾರೆಯೇ?

ಸರಿ. ಮಾರನೆ ದಿನವೇ ಇಲ್ಲಿನ್ನ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ. ಈ ಹೋಟೆಲ್ ನ ಮೇಲೆ ದಾಳಿ. ಆ ಬೇಕರಿಯನ್ನು ಸುಟ್ಟರಂತೆ.

ರೆಸ್ಟುರಾಗಳನ್ನೂ, ಬೇಕರಿಗಳನ್ನೂ ನಡೆಸುವವರು ಎಲ್ಲಿಯವರು ಎಂಬುದು ತೆರೆದಿಟ್ಟ ಪುಸ್ತಕ. ಹೆಚ್ಚಿನ ಬೇಕರಿಯವರೋ, ಅವನ ಊರಿನ ಸುತ್ತಮುತ್ತಲವರೇ.

ಇವೆಲ್ಲ ಪತ್ರಿಕೆಗಳಲ್ಲಿ ನೋಡಿದಾಗ ಅಷ್ಟು ಮನಸ್ಸಿಗೆ ತಟ್ಟದೇ ಹೋಗಬಹುದು. ಆದರೆ, ಸುಟ್ಟುಹೋದ ಬೇಕರಿಯ ಮೇಲಿನ ಮಸಿ ಕಣ್ಣ…