ಆರು ಹುಸಿ ವಿದ್ಯೆಗಳು

ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || ೧||

ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||೨||

ಬಾಯ್ಮಾತಿನಲಿ ಮಾತ್ರ ಬಳಕೆಯಲಿ ತಾನಿಲ್ಲದೆಲೆ
ಬರಿ ರಂಜಿಸುವುದದು ಗಿಳಿವಿದ್ಯೆಯು! ||೩||

ಬಲ್ಲವರ ಮುಂದೆ ತೋರದೆಲೆ, ಮರುವರ ಮುಂದೆ ಬೆಳಗುತಲಿ
ಬಯಸಿದವರಿಗೆ ಕಲಿಸದಿರಲದುವೆ ದುರುಳವಿದ್ಯೆಯು || ೪||

ಆವ ಕಲಿಕೆಯದು ಕಂಡವರ ಮಚ್ಚರವ ತರಿಸುತಲಿ
ಸುಖನಿದಿರೆಯ ಕೆಡಿಸುವುದದು ಶೂಲವಿದ್ಯೆಯು! || ೫||

ಕಂಡವರೊಳ್ಳೆಯ ಮಾತುಗಳ ತನ್ನದೆಂಬಂತೆ ನುಡಿಯುತಲಿ
ಅಂತೋ ಇಂತೋ ಹೆಸರಗಳಿಸಲದು ತಾ ಕಳ್ಳವಿದ್ಯೆಯು! ||೬||

(ಸಂಸ್ಕೃತದಿಂದ ಭಾವಾನುವಾದ)


ಸಂಸ್ಕೃತ ಮೂಲ ಹೀಗಿದೆ:

ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬||

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?