Posts

Showing posts from August, 2008

ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...

Image
ಇವತ್ತು ಶಿಕಾಗೋದಲ್ಲಿ ಅಕ್ಕ ಕನ್ನಡ ಸಮ್ಮೇಳನ ಶುರುವಾಗ್ತಿದೆ. ಶಿಕಾಗೋ ಇಲ್ಲಿಂದ ದೂರ, ಬಿಡಿ. ಹೋಗೋದು ಕಷ್ಟ. ಆದ್ರೆ ಅಲ್ಲಿ ಬಿಡುಗಡೆ ಆಗೋ ಸ್ಮರಣಸಂಚಿಕೆಗೆ ಅಂತ ಒಂದು ಕಥೆ ಕಳಿಸಿದ್ದೆ ಕೆಲವು ತಿಂಗಳ ಹಿಂದೆ. ಕೆಲವು ವಾರಗಳ ಹಿಂದೆ ಸಾಹಿತ್ಯ ಸಂಚಿಕೆಯ ಸಂಚಾಲಕರು ಫೋನ್ ಮಾಡಿ, ನಾನು ಕಳಿಸಿದ್ದ ಕಥೆ ಪ್ರಕಟವಾಗುತ್ತೆ ಈ ಸಂಚಿಕೇಲಿ ಅಂತ ಹೇಳಿದರು. ಹೇಗಿದ್ರೂ ಅದು ಇವತ್ತು ಪ್ರಕಟ ಆಗ್ತಾ ಇರೋದರಿಂದ, ನಾನು ಅದನ್ನ ಬೇರೆಯವರ ಜೊತೆ ಹಂಚಿಕೊಂಡರೂ ತಪ್ಪಿಲ್ಲ ಅನ್ನಿಸಿತು. ಅದಕ್ಕೆ ಕಥೆಯನ್ನ ಕೆಳಗಿನ ಕೊಂಡಿಯಲ್ಲಿ ಹಾಕಿದೀನಿ. ಓದಿ. ಏನನ್ನಿಸ್ತೋ ದಯವಿಟ್ಟು ಮರೀದೆ ಹೇಳಿ. ಕಥೆ ಇಲ್ಲಿದೆ : ತಂಬೂರಿ ಮೀಟಿದವ..ಭವಾಬ್ದಿ ದಾಟಿದವ.... -ಹಂಸಾನಂದಿ

ಆರದ ದೀಪ

ಎಷ್ಟೋ ವರ್ಷಗಳ ಹಿಂದಿನ ಮಾತು.

ಅವತ್ತು ಮೇಜಿನ ಮೇಲಿಟ್ಟಿದ್ದ ಅವನ ಡೈರಿ ತೆಗೆದು ನೋಡುತ್ತಿದ್ದೆ.

ತೆಗೆದ ತಕ್ಷಣ ಯಾವುದೋ ಸಡುವಿನ ಪುಟದಲ್ಲಿ ಕಂಡದ್ದು ಒಂದು ಕವಿತೆ.

ಪದ್ಯದ ಹೆಸರಲ್ಲೇ ಒಂದು ಹುಡುಗಿ ಕಂಡಳು! ಆಸಕ್ತಿಯಿಂದ ಓದತೊಡಗಿದೆನೆಂಬ ನೆನಪು.

ಇಷ್ಟು ವರ್ಷಗಳ ನಂತರ, ಒಂದೇ ಒಂದು ಸಲ ಓದಿದ ಕವಿತೆ ಪೂರ್ತಿ ನೆನಪಿರುವುದು ಸಾಧ್ಯವೇ ಇಲ್ಲ. ಆದರೂ, ಅದರ ಮೊದಲು - ಕೊನೆ ಸುಮಾರಾಗಿ ಹೀಗಿತ್ತೇನೋ ಎನ್ನಿಸುತ್ತಿದೆ.ಸುಲೋಚನಾ
---------

ನಿನ್ನನಗಲಿ
ನಾನು ನಾನಾಗಿಲ್ಲ ಈಗ!
..
..
..
..


..
..
ನನ್ನ ಮುದ್ದು ಸುಲೋಚನಾ
ತಾಳೆನು ಈ ಬೇಸರ!

ನನ್ನ ಮುದ್ದು ಸು-ಲೋಚನಾ
ಬರುವೆಯಾ ಬೇಗ?

ನಿನ್ನನಗಲಿ
ನಾನು ನಾನಾಗಿಲ್ಲ ಈಗ!


(*: ನನ್ನ ಸು-ಲೋಚನ (=ಕನ್ನಡಕ) ಮುರಿದು ಹೊಸ ಕನ್ನಡಕಕ್ಕೆ ಕಾಯುತ್ತಿದ್ದಾಗ ಬರೆದದ್ದು) :) !ಹೀಗೆ ಆ ಡೈರಿಯಲ್ಲಿ ಕಣ್ಣಿನ ಸಂಗಾತಿ ಸುಲೋಚನೆಯ ನೆನಪಿನ ಜೊತೆಗೆ, ಇನ್ನೂ ಹಲವಾರು ಕವಿತೆಗಳು, ಕಥೆಗಳು ಕೂಡ ಇದ್ದವು. ಅವನ ಮುತ್ತಿನಂತಹ ಅಕ್ಷರಗಳಲ್ಲಿ ಬರೆದದ್ದನ್ನು ನೋಡುವುದೇ ಒಂದು ಸೊಗಸಾಗಿತ್ತು. ನನ್ನ ಅಕ್ಷರವೂ ಅಷ್ಟು ಚೆನ್ನಾಗಿ ಇರಬಾರದೇ ಎಂಬ ಆಸೆಯಾಗುತ್ತಿತ್ತು ನನಗೆ.
ಅವನ ಬರವಣಿಗೆಗೆ ಮನಸ್ಸನ್ನು ಗೆಲ್ಲುವ ಶಕ್ತಿ ಇತ್ತು. ಎಷ್ಟೆಂದರೂ ಅವನ ಹೆಸರೇ ಅದಾಗಿತ್ತಲ್ಲ! ಅವನು ಯಾವತ್ತಾದರೂ ಪತ್ರಿಕೆಗಳಿಗೆ ಅವನ ಕವನ ಕಥೆಗಳನ್ನು ಕಳಿಸಿದ್ದನೇ? ನಂತರದ ದಿನಗಳಲ್ಲಿನ ಧಾವಂತದ ಜೀವನದ ನಾಗಾಲೋಟದಲ್ಲಿ ಅವನು ಏನಾದರೂ ಬರೆದನೋ ಬರೆಯಲಿಲ್ಲವೋ? ಆಗ ಕೇಳಲ…

ಗೆಳೆಯ

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ
ಸಂಸ್ಕೃತ ಮೂಲ:
ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ನಿಗೂಹತಿ ಗುಣಾನ್ ಪ್ರಕಟೀಕರೋತಿ|
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ|| -ಹಂಸಾನಂದಿ

ಮರಗಳೇಕೆ ಹಣ್ಣನೀಯುವುವು?

ತೊರೆನದಿಗಳು ಕುಡಿಯವು ತಮ್ಮ ನೀರನ್ನು
ಮರಗಳಂತೂ ತಿನ್ನವು ತಮ್ಮ ಹಣ್ಣನ್ನು
ಸುರಿಸದು ಮುಗಿಲು ಮಳೆಯ ನೀರಡಿಕೆಯೆಂದು
ಪರೋಪಕಾರಕೆ ಜೀವ ಸವೆಸುವರು ಸುಜನರು ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ! ಮೂಲ:
ಪಿಬಂತಿ ನದ್ಯಃ ಸ್ವಯಮೇವ ನೋದಕಂ
ಸ್ವಯಂ ನ ಖಾದಂತಿ ಫಲಾನಿ ವೃಕ್ಷಾ:
ಧಾರಾದರೋ ವರ್ಷತಿ ನಾತ್ಮಹೇತವೇ
ಪರೋಪಕಾರಾಯ ಸತಾಂ ವಿಭೂತಯಃ ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ -ಹಂಸಾನಂದಿ

ಕನ್ನಡ ಬರ್ದೋನು ಕೋಡಂಗಿ

Image
ಹಾಸನದಲ್ಲೆಲ್ರೂ ಆಡೋ ಮಾತೇನು?
ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು?
ಮಂಗಂಗಿನ್ನೊಂದ್ಹೆಸರ್ ಗೊತ್ತಾ?
ಕನ್ನಡ ಬರ್ದೋನು ಕೋಡಂಗಿ ಕಂತಿ ಹಂಪನ ಸಮಸ್ಯೆಗಳ ಬಗ್ಗೆ ಕೇಳೇ ಇರ್ತೀರ. ಒಂದು ಸಾಲು ಪದ್ಯ ಕೊಟ್ಟು ಅದರಲ್ಲಿ ತಪ್ಪು ತಪ್ಪಾಗಿ ಅರ್ಥ ಮಾಡೋ ಹಾಗಿಟ್ಟು, ಆಮೇಲೆ ಉಳಿದ ಸಾಲುಗಳನ್ನ ಬರೀಬೇಕಾದ್ದು ಇಲ್ಲಿಯ ಚಮತ್ಕಾರ. ಇವತ್ತು ಯಾವ್ದೋ ಸಂಸ್ಕೃತ ಪದ್ಯ ಓದೋವಾಗ, ಅದನ್ನ ಅನುವಾದ ಮಾಡೋ ಬದಲು ಹೊಸದಾಗಿ ಅದೇ ತರಹ ಬರೆಯಣ ಅನ್ನಿಸ್ತು. ಅದೇ ಈ ಪ್ರಯತ್ನ. ಅಷ್ಟೇ. ಕನ್ನಡ ಬರ್ದೋನು ಕೋಡಂಗಿ ಅನ್ನೋ ಒಂದು ಸಾಲು ಕೊಟ್ಟರೆ, ಮೊದಲಿಗೆ ಮೂರು ಪ್ರಶ್ನೆಗಳು ಬರೋ ಸಾಲು ಹಾಕಿದ್ರೆ ಹೇಗಾಗತ್ತೆ - ನೋಡಿ. ಪ್ರಶ್ನೆ: ಹಾಸನದಲ್ಲೆಲ್ರೂ ಆಡೋ ಮಾತೇನು? - ಉತ್ತರ: ಕನ್ನಡ
(ಕರ್ನಾಟಕದಲ್ಲಿ, ಹಾಸನ, ಮಂಡ್ಯ ಮೊದಲಾದ ಕಡೆಯೇ ಅತಿ ಹೆಚ್ಚು ಶೇಕಡಾವಾರು ಕನ್ನಡಿಗರು ಇರೋದು ಅನ್ನೋದು ಗೊತ್ತಿರೋ ವಿಷಯವೇ)
ಪ್ರಶ್ನೆ: ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು? - ಉತ್ತರ: ಬರ್ದೋನು
(ಬರೆದವನು :) ಬರದವನು ಅಲ್ಲ :) ) - ನಮ್ಮೂರ್ ಕಡೆ ಆಡುಮಾತಲ್ಲಿ ಎರಡಕ್ಕೂ ಬರ್ದೋನು ಅಂತ ಹೇಳೋದೇ ರೂಢಿ! ಪ್ರಶ್ನೆ: ಮಂಗಂಗಿನ್ನೊಂದ್ಹೆಸರ್ ಗೊತ್ತಾ? - ಉತ್ತರ: ಕೋಡಂಗಿ ಅದಕ್ಕೇ ಕೊನೇಸಾಲು ಕನ್ನಡ ಬರ್ದೋನು ಕೋಡಂಗಿ ಕನ್ನಡ ’ಬರ’ದೇ ಇರೋರು, ನನ್ನ ಹೊಡೀಬೇಡಿ ಸದ್ಯಕ್ಕೆ!
-ಹಂಸಾನಂದಿ

ಹಣೆಯಲ್ಲಿ ಬರೆದದ್ದು

ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯ ಸಿರಿಗೊಡೆಯ ಮಗನು ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು! ಮೂಲ ಸಂಸ್ಕೃತ ಪದ್ಯ ಹೀಗಿದೆ: ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||
-ಹಂಸಾನಂದಿ

ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?

ದಟ್ಸ ಕನ್ನಡದಲ್ಲಿ ಇವತ್ತು ಪ್ರಕಟವಾಗಿರುವ ವರದಿ ಒಂದರ ಕೊಂಡಿ ಕೆಳಗಿದೆ. ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣhttp://thatskannada.oneindia.in/news/2008/08/18/lunar-eclipse-affect-on-12rashis-astrologer-sk-jain.html#cmntTop ಎಸ್.ಕೆ. ಜೈನ್ ಅವರು ಏನಾದರೂ ಹೇಳಲಿ, ಅದು ಅವರ ಹಕ್ಕು, ಮತ್ತು ನಂಬಿಕೆ.ಆದರೆ,ವರದಿಗಾರರು ವಾರ್ತೆಯೊಂದನ್ನು ಪ್ರಕಟಿಸುವ ಮೊದಲು ಸ್ವಲ್ಪವಾದರೂ, ಅದು ಸರಿಯೇ ತಪ್ಪೇ ಅನ್ನುವುದನ್ನು ನೋಡಿ ತಿದ್ದಿ ಬರೆಯಬೇಡವೇ? ಈ ಕೆಳಗಿನ ರೀತಿಯ ತಪ್ಪು ತಪ್ಪಾದ ಸಾಲುಗಳ ಬಗ್ಗೆ ನನಗೆ ಬಹಳ ಸಿಟ್ಟು ಬರುತ್ತೆ. ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ. ಇದೆಷ್ಟು ಸರಿ ಎಂದು ತಿಳಿಯಲು, ಕಳೆದ ೫ ವರ್ಷಗಳಲ್ಲಿ ನಡೆದಿರೋ ಗ್ರಹಣಗಳ ಪಟ್ಟಿ ನೋಡೋಣವೇ? ೨೦೦೪: ಏಪ್ರಿಲ್ ೧೯: ಸೂರ್ಯಗ್ರಹಣ; ಮೇ ೪: ಚಂದ್ರಗ್ರಹಣ

ಅಕ್ಟೋಬರ್ ೧೪: ಸೂರ್ಯಗ್ರಹಣ; ಅಕ್ಟೋಬರ್ ೨೮: ಚಂದ್ರಗ್ರಹಣ ೨೦೦೫

ಏಪ್ರಿಲ್ ೦೮: ಸೂರ್ಯಗ್ರಹಣ; ಏಪ್ರಿಲ್ ೨೪: ಚಂದ್ರ ಗ್ರಹಣ

ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ ೨೦೦೬: ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ

ಸೆಪ್ಟೆಂಬರ್ ೭: ಚಂದ್ರಗ್ರಹಣ; ಸೆಪ್ಟೆಂಬರ್ ೨೨: ಸೂರ್ಯಗ್ರಹಣ ೨೦೦೭: ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ

ಆಗಸ್ಟ್ ೨೮: ಚಂದ್ರಗ್ರಹಣ;ಸೆಪ್ಟೆಂಬರ್ ೧೧: ಸೂರ್ಯಗ್…

ಹಿರಣ್ಮಯೀಂ ಲಕ್ಷ್ಮೀಂ ಸದಾ ಭಜಾಮಿ

Image
ಅಗಸ್ಟ್ ೧೫-೨೦೦೮

ಇವತ್ತು ಸ್ವಾತಂತ್ರೋತ್ಸವ, ಮತ್ತೆ ಕಮಲದಲಿ ನಿಂದಿಹ, ಕಮಲವ ಕೈಯಲ್ಲಿ ಹಿಡಿದ, ಕಮಲಮುಖಿಯಾದ ವರಲಕ್ಷ್ಮಿಯ ಪೂಜೆಯ ದಿನ!


ಚಿತ್ರ: ಎಂ ಎನ್ ಆರ್ ಪ್ರಸಾದ್


ಇವತ್ತು ಸರಸ್ವತಿ ಮತ್ತೆ ಲಕ್ಷ್ಮಿ ಇಬ್ಬರನ್ನೂ ನೆನೆಯಬಹುದಾದ ದಿನ ಅನ್ನಬಹುದು. ಯಾಕಂದ್ರೆ, ನಮ್ಮ ತಾಯಿ ಭಾರತಿ. ಭಾರತಿ ಅಂದರೆ ಸರಸ್ವತಿ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಇನ್ನು ಶ್ರಾವಣ ಪೂರ್ಣಿಮೆಯ ಮುಂಚಿನ ಶುಕ್ರವಾರದಲ್ಲಿ ಮಾಡುವ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸುಮಾರು ದಕ್ಷಿಣಭಾರತದಲ್ಲೆಲ್ಲ ಇದೆ.

ಸಂಗೀತ ತ್ರಿಮೂರ್ತಿಗಳಲ್ಲ್ಲಿ ಒಬ್ಬರು ಮುತ್ತುಸ್ವಾಮಿ ದೀಕ್ಷಿತರು. ಅವರ ಶ್ರೀವರಲಕ್ಷ್ಮೀ ನಮಸ್ತುಭ್ಯಂ ಅನ್ನುವ ರಚನೆ ಪ್ರಖ್ಯಾತವಾಗಿದೆ. ಅದರಲ್ಲಿ ಲಕ್ಷ್ಮಿಯನ್ನು ಭಕ್ತರಿಗೆ ಸುಲಭವಾಗಿ ದೊರೆಯುವ ವರಲಕ್ಷ್ಮಿಯನ್ನು ಸ್ಮರಿಸುತ್ತಾರೆ.

ಸಂಗೀತ ಸರಸ್ವತಿಯ ಉಪಾಸಕರಾದ ಮುತ್ತುಸ್ವಾಮಿ ದೀಕ್ಷಿತರು ಲಕ್ಷ್ಮಿಯನ್ನು (ಅಂದರೆ ಸಂಸಾರ ನಡೆಸಲು ಬೇಕಾದ ಹಣವನ್ನು) ಕಡೆಗಣಿಸಿದ್ದರೆಂದು ಅವರ ಹೆಂಡತಿಗೆ ಸ್ವಲ್ಪ ಅಸಮಾಧಾನವಿತ್ತಂತೆ. ಅದನ್ನು ಅವರು ಗಂಡನೆದುರು ತೋರಿಸಿಯೂಬಿಟ್ಟರಂತೆ. ಯಾರಾದರೂ ರಾಜರದೋ, ಜಮೀನ್ದಾರರದೋ ಆಶ್ರಯ ಹಿಡಿದು ಹಣಗಳಿಸಬಾರದೇ ಅಂದರಂತೆ. ಆಕೆಯದೇನು ತಪ್ಪಿಲ್ಲ ಬಿಡಿ - ಮನೆಯನ್ನು ನೋಡಿಕೊಳ್ಳದ ಗಂಡನಾದರೆ, ಯಾವ ಹೆಂಡತಿಯೂ ಅದನ್ನೇ ಅಂದಾಳು!ಅಲ್ಲವೇ?

ಆ ಸಂದರ್ಭದಲ್ಲೇ ದೀಕ್ಷಿತರು ಅದಕ್ಕೆ ಉತ್ತರವೋ ಎನ್ನುವಂತೆ, ಹಿರಣ್ಮಯೀಂ ಲಕ್ಷ್ಮೀಂ ಸದಾ ಭಜಾಮಿ, ಹೀನ ಮಾನವ…

ಕತ್ತೆಯನು ಹತ್ತಿದವರು

ಕತ್ತೆಯನು ಏರುವ ಹೀನಾಯಕಿಂತ
ಲೇಸು ಕುದುರೆಯಿಂದೊಂದು ಒದೆತ!
ಮರುವರೊಡನೆ ಕೀಳು ಗೆಳೆತನಕಿಂತ
ಲೇಸು ಅರಿತವರೊಡನೆ ಸೆಣಸಾಟ!!

ಮೂಲ ಸಂಸ್ಕೃತ ಪದ್ಯ ಹೀಗಿದೆ:

ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ |
ಸ್ಪರ್ಧಾಪಿ ವಿದುಷಾ ಯುಕ್ತಾ ನ ಯುಕ್ತಾ ಮೂರ್ಖ ಮಿತ್ರತಾ ||

-ಹಂಸಾನಂದಿ

ಎಂಟರ ನಂಟು

ಇವತ್ತು ೦೮-೦೮-೦೮ ಬಂದಾಯ್ತು. ಈ ಎಂಟು ಅನ್ನೋ ಅಂಕೆ ನಮ್ಮೂರಲ್ಲಿ ಬಹಳ ಇರೋ ಚೀನೀಯರಿಗೆ ಬಹಳ ಆಗಿಬರೋ ಅಂಕೆಯಂತೆ. ಅದಕ್ಕೇ ಇಲ್ಲಿ ಮನೆ ಮಾರೋವಾಗ ಕ್ರಯವನ್ನ $೮೮೮,೮೮೮ ಅಥ್ವಾ $೬೦೮,೮೮೮ ಇನ್ನು ಮುಂತಾಗಿ ಹಾಕಿರೋದುಂಟು. ಅದೇ ಏಕೆ, ಇನ್ನೇನು ಬೀಜಿಂಗ್ ನಲ್ಲಿ ಶುರುವಾಗೋ ಒಲಂಪಿಕ್ಸ್ ಕೂಡ, ಆಗಸ್ಟ್ ೦೮, ೨೦೦೮, ಇವತ್ತು ಈ ಗಳಿಗೇಲಿ ಶುರು ಆಗೋದಕ್ಕೆ ಈ ಮೂರೆಂಟರ ಮಹಿಮೆಯ ಬಗ್ಗೆ ಚೀನೀಯರಿಗಿರುವ ನಂಬುಗೆಯೇ ಕಾರಣ ಅನ್ನಬಹುದು!

ಒಂದೆರಡು ದಿನದ ಹಿಂದೆ ರೇಡಿಯೋಲಿ ಕೇಳಿದ ಮಾತಿದು. ಶುಕ್ರವಾರ ೦೮-೦೮-೦೮ ರಂದು ಮದುವೆಯಾಗಬೇಕೆಂದು ಬಂದಿರುವ ಅರ್ಜಿಗಳು ಮಾಮೂಲಿಗಿಂತ ಮೂರುನಾಕರಷ್ಟು ಹೆಚ್ಚಿಗೆ ಇವೆಯಂತೆ.

ಎಂಟರ ನಂಟಿಂದ, ಈ ದಿನ ಮದುವೆಯಾದ ಜೋಡಿಗಳಿಗೆ ತಮ್ಮ ನಂಟು ಕರದಂಟಿನಷ್ಟು ಸವಿಯಾಗಿರಲಿ ಅನ್ನುವ ಆಸೆಯುಂಟೇನೋ ಅವರಿಗೆ.

ಹೀಗೂ ಉಂಟೇ ಎನ್ನಲೇ?

-ಹಂಸಾನಂದಿ

ಹದಿನಾರರ ಹರೆಯ

ಮೊದಲ ಐದು ವರುಷದಲಿ
ಮುದ್ದು ಇರಲಿ ಬಹಳ;
ಇನ್ನು ಮತ್ತೆ ಹತ್ತು ವರುಷ
ತಿದ್ದಬೇಕು ಬಹಳ;

ಬರಲು ಹದಿನಾರರ ಹರೆಯ,
ಬಿಡು ನೀನು ಕಳವಳ!
ಮಗನ ಕಾಣು ಗೆಳೆಯನಂತೆ
ಆಗೆಲ್ಲವು ಹದುಳ !!


(ಭಾವಾನುವಾದ ನನ್ನದು)

ಸಂಸ್ಕೃತ ಮೂಲ - ಚಾಣಕ್ಯ ಪಂಡಿತನದ್ದು:

ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್
ಪ್ರಾಪ್ತೇ ತು ಷೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್ ||

ಅಳಿಯ, ಮನೆ ತೊಳಿಯ!!

ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ!

ಸಂಸ್ಕೃತ ಮೂಲ:

ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

*: ಮೂಲದಲ್ಲಿ ಮನೆ ಅಳಿಯನೆಂದಿಲ್ಲ; ಬರೀ ಅಳಿಯನೆಂದಿದೆ

ಆದರೆ, ಸ್ವಸ್ಥಾನಕ್ಕೆ ಹೋಗದೆ, ’ಕನ್ಯಾ’ ರಾಶಿ Smiling ಯಲ್ಲೇ ನೆಲೆನಿಂತಿದ್ದಾನೆ ಎಂದು ಕವಿ ಹೇಳುವಾಗ, ಅವನು ಕಾಡುವ ಮನೆ ಅಳಿಯನೇ ಆಗಿರಬೇಕೆಂದು ನನಗೆ ತೋರಿತು!

-ಹಂಸಾನಂದಿ
Image
"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ. ಈ ವಿಷಯ ಯಾಕೆ ಬಂತು ಅಂತೀರಾ? ಬರಿಗಣ್ಣಿಗೆ ಕಾಣೋ ಐದೂ ಗ್ರಹಗಳನ್ನ ಒಟ್ಟಿಗೆ ನೋಡೋ ಒಂದು ಒಳ್ಳೇ ಸಂದರ್ಭ ಈ ತಿಂಗಳು ಬರ್ತಾ ಇದೆ. ಅದರಲ್ಲೂ ನಾಕು ಗ್ರಹಗಳು ತೀರಾ ಅಕ್ಕ ಪಕ್ಕದಲ್ಲೇ ಇರತ್ವೆ. ಇದನ್ನ ಆಗ್ಲೇ ನಮ್ಮ ಟಿವಿ ವಾಹಿನಿಗಳವರು ಸಿಂಹ ರಾಶಿಯಲ್ಲಿ ದುಷ್ಟ ಚತುಷ್ಟಯ ಗ್ರಹಕೂಟ :) - ಇಂತಿಂಥಾ ಹೊತ್ತು ಇಂತಿಂಥಾ ರಾಶಿಯಲ್ಲಿ ಹುಟ್ಟಿದವರು ಶಾಂತಿ ಮಾಡ್ಕೋಬೇಕು ಅದು ಇದು ಅಂತ ಆಗ್ಲೇ ಹೇಳ್ತಿದಾರೋ ಏನೋ ನಂಗಂತೂ ಗೊತ್ತಿಲ್ಲ. ಹೋದ ಗ್ರಹಣ ಆಗೋಕೆ ಮುಂಚೆ ಅಂತೂ ಇವೆಲ್ಲ ಬಂದಿತ್ತು ಟಿವಿಯಲ್ಲಿ ಅಂತ ಕೇಳಿದೆ. (ನಾನು ನೋಡ್ಲಿಲ್ಲ). ಇರ್ಲಿ. ಬರಿಗಣ್ಣಿಗೆ ಕಾಣೋ ಗ್ರಹಗಳು ಐದು. ಮಂಗಳ-ಬುಧ-ಗುರು-ಶುಕ್ರ-ಶನಿ. ಈ ಐದರಲ್ಲಿ ಗುರು ಒಂದು ಬಿಟ್ಟು ಇನ್ನು ನಾಕೂ ಪಶ್ಚಿಮದಲ್ಲಿ ಸೂರ್ಯ ಮುಳುಗಿದ ಕೂಡಲೆ ಕಾಣುತ್ತವೆ ಈ ತಿಂಗಳು. ಗುರು ಒಂದು ಪೂರ್ವದಲ್ಲಿ ಕಾಣತ್ತೆ.ಆಗಸ್ಟ್ ಹದಿನೈದರ ಸಂಜೆಯ ಆಕಾಶ - ಚಿತ್ರದ ಮೇಲೆ ಚಿಟಕಿಸಿದರೆ ಚೆನ್ನಾಗಿ ಕಾಣುತ್ತೆ.ಇದನ್ನ ನೋಡೋಕೆ ನಿಮಗೆ ಬೇಕಾದ್ದು ಇಷ್ಟು. ೧. ಪಶ್ಚಿಮ ದಿಗಂತ ಕಾಣೋ ಅಂತಹ ಒಂದು ಜಾಗ ೨. ಮೋಡ ಇಲ್ಲದ ಆಕಾಶ…

ಬಾಡಿಗೆ ಮನೆ

ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ್ದವು. ಟಿ.ಕೆ.ರಾಮರಾವ್ ಮೊದಲಾದವರ ಕುತೂಹಲಕಾರಿ ಕಥೆಗಳು ಎರಡು ಮೂರು ಕಂತುಗಳಲ್ಲಿ ಬರುತ್ತಿದ್ದವು.

ಇವುಗಳ ಜೊತೆಯಲ್ಲೇ ನಾನು ಬಹಳ ಆಸಕ್ತಿಯಿಂದ ಓದುತ್ತಿದ್ದ ಇನ್ನೊಂದು ಬಗೆಯ ಕಥೆಗಳೂ ಇದ್ದವು. ಅವೇ ಅನುವಾದಿತ ಕಥೆಗಳು. ಮಯೂರದಲ್ಲಿ ತಮಿಳು ತೆಲುಗು ಮಲೆಯಾಳ ಮರಾಠಿ ಭಾಷೆಗಳಿಂದ ಕನ್ನಡಕ್ಕೆ ಬರುತ್ತಿದ್ದ ಕಥೆಗಳಿದ್ದರೂ, ನಾನು ಹೆಚ್ಚಾಗಿ ಕಾಯುತ್ತಿದ್ದುದ್ದು ಇಂಗ್ಲಿಷ್ ಕಥೆಗಳ ಅನುವಾದಕ್ಕೆ. ಐದನೇ ತರಗತಿಯನಂತರ ಇಂಗ್ಲಿಷ್ ಕಲಿಯತೊಡಗಿದ ನನಗೆ ಉದ್ದನೆಯ ಕಥೆಗಳನ್ನು ಕನ್ನಡದಲ್ಲಿ ಓದುವುದೇ ಸಲೀಸೆನಿಸುತ್ತಿತ್ತು. ಅದರಲ್ಲೂ ಎನ್.ವಾಸುದೇವರಾವ್ (ಅವರೇ ಎಂತಲೇ ನನ್ನ ನೆನಪು) ಅವರು ಅನುವಾದಿಸಿದ ಆರ್ಥರ್ ಕಾನನ್ ಡಾಯಲ್ ರ ಶೆರ್ಲಾಕ್ ಹೋಮ್ಸ್ ಕಥೆಗಳು ಅವುಗಳ ನಿಗೂಢತೆಯಿಂದ
ಮನಸೆಳೆಯುತ್ತಿದ್ದವು. 'ತಪ್ಪಿಸಿಕೊಂಡ ಸದ್ಗೃಹಸ್ತೆ' (A Scandal in Bohemia), 'ರಹಸ್ಯ ಪತ್ರದ ಕಳವು' (The Paddington Mystery), 'ಕೆಂಪು ತಲೆಯವರ ಕೂಟ' (The Red Headed League), 'ರಕ್ತಪರಿಶೋಧನೆ' (A Study in Scarlet), 'ಬ್ಯಾಸ್ಕರ್ವಿಲ್ಲಿಯ ಬೇಟೆನಾಯಿ' ( The Hound of Bask…

ಮರದಂತಹ ಮನಸ್ಸು

ನೆರೆಬಂದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?
ಅಗ್ಗಳ = ಉತ್ತಮ, ಒಳ್ಳೆಯ
ಸಂಸ್ಕೃತ ಮೂಲ: ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ|| -ಹಂಸಾನಂದಿ