ಎಂಟರ ನಂಟು

ಇವತ್ತು ೦೮-೦೮-೦೮ ಬಂದಾಯ್ತು. ಈ ಎಂಟು ಅನ್ನೋ ಅಂಕೆ ನಮ್ಮೂರಲ್ಲಿ ಬಹಳ ಇರೋ ಚೀನೀಯರಿಗೆ ಬಹಳ ಆಗಿಬರೋ ಅಂಕೆಯಂತೆ. ಅದಕ್ಕೇ ಇಲ್ಲಿ ಮನೆ ಮಾರೋವಾಗ ಕ್ರಯವನ್ನ $೮೮೮,೮೮೮ ಅಥ್ವಾ $೬೦೮,೮೮೮ ಇನ್ನು ಮುಂತಾಗಿ ಹಾಕಿರೋದುಂಟು. ಅದೇ ಏಕೆ, ಇನ್ನೇನು ಬೀಜಿಂಗ್ ನಲ್ಲಿ ಶುರುವಾಗೋ ಒಲಂಪಿಕ್ಸ್ ಕೂಡ, ಆಗಸ್ಟ್ ೦೮, ೨೦೦೮, ಇವತ್ತು ಈ ಗಳಿಗೇಲಿ ಶುರು ಆಗೋದಕ್ಕೆ ಈ ಮೂರೆಂಟರ ಮಹಿಮೆಯ ಬಗ್ಗೆ ಚೀನೀಯರಿಗಿರುವ ನಂಬುಗೆಯೇ ಕಾರಣ ಅನ್ನಬಹುದು!

ಒಂದೆರಡು ದಿನದ ಹಿಂದೆ ರೇಡಿಯೋಲಿ ಕೇಳಿದ ಮಾತಿದು. ಶುಕ್ರವಾರ ೦೮-೦೮-೦೮ ರಂದು ಮದುವೆಯಾಗಬೇಕೆಂದು ಬಂದಿರುವ ಅರ್ಜಿಗಳು ಮಾಮೂಲಿಗಿಂತ ಮೂರುನಾಕರಷ್ಟು ಹೆಚ್ಚಿಗೆ ಇವೆಯಂತೆ.

ಎಂಟರ ನಂಟಿಂದ, ಈ ದಿನ ಮದುವೆಯಾದ ಜೋಡಿಗಳಿಗೆ ತಮ್ಮ ನಂಟು ಕರದಂಟಿನಷ್ಟು ಸವಿಯಾಗಿರಲಿ ಅನ್ನುವ ಆಸೆಯುಂಟೇನೋ ಅವರಿಗೆ.

ಹೀಗೂ ಉಂಟೇ ಎನ್ನಲೇ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?