ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?

ದಟ್ಸ ಕನ್ನಡದಲ್ಲಿ ಇವತ್ತು ಪ್ರಕಟವಾಗಿರುವ ವರದಿ ಒಂದರ ಕೊಂಡಿ ಕೆಳಗಿದೆ.

ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣ

http://thatskannada.oneindia.in/news/2008/08/18/lunar-eclipse-affect-on-12rashis-astrologer-sk-jain.html#cmntTop

ಎಸ್.ಕೆ. ಜೈನ್ ಅವರು ಏನಾದರೂ ಹೇಳಲಿ, ಅದು ಅವರ ಹಕ್ಕು, ಮತ್ತು ನಂಬಿಕೆ.ಆದರೆ,ವರದಿಗಾರರು ವಾರ್ತೆಯೊಂದನ್ನು ಪ್ರಕಟಿಸುವ ಮೊದಲು ಸ್ವಲ್ಪವಾದರೂ, ಅದು ಸರಿಯೇ ತಪ್ಪೇ ಅನ್ನುವುದನ್ನು ನೋಡಿ ತಿದ್ದಿ ಬರೆಯಬೇಡವೇ?

ಈ ಕೆಳಗಿನ ರೀತಿಯ ತಪ್ಪು ತಪ್ಪಾದ ಸಾಲುಗಳ ಬಗ್ಗೆ ನನಗೆ ಬಹಳ ಸಿಟ್ಟು ಬರುತ್ತೆ.

ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ.

ಇದೆಷ್ಟು ಸರಿ ಎಂದು ತಿಳಿಯಲು, ಕಳೆದ ೫ ವರ್ಷಗಳಲ್ಲಿ ನಡೆದಿರೋ ಗ್ರಹಣಗಳ ಪಟ್ಟಿ ನೋಡೋಣವೇ?

೨೦೦೪:

ಏಪ್ರಿಲ್ ೧೯: ಸೂರ್ಯಗ್ರಹಣ; ಮೇ ೪: ಚಂದ್ರಗ್ರಹಣ

ಅಕ್ಟೋಬರ್ ೧೪: ಸೂರ್ಯಗ್ರಹಣ; ಅಕ್ಟೋಬರ್ ೨೮: ಚಂದ್ರಗ್ರಹಣ

೨೦೦೫

ಏಪ್ರಿಲ್ ೦೮: ಸೂರ್ಯಗ್ರಹಣ; ಏಪ್ರಿಲ್ ೨೪: ಚಂದ್ರ ಗ್ರಹಣ

ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ

೨೦೦೬:

ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ

ಸೆಪ್ಟೆಂಬರ್ ೭: ಚಂದ್ರಗ್ರಹಣ; ಸೆಪ್ಟೆಂಬರ್ ೨೨: ಸೂರ್ಯಗ್ರಹಣ

೨೦೦೭:

ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ

ಆಗಸ್ಟ್ ೨೮: ಚಂದ್ರಗ್ರಹಣ;ಸೆಪ್ಟೆಂಬರ್ ೧೧: ಸೂರ್ಯಗ್ರಹಣ

೨೦೦೮:

ಫೆಬ್ರವರಿ ೭: ಸೂರ್ಯಗ್ರಹಣ; ಫೆಬ್ರವರಿ ೨೧: ಚಂದ್ರಗ್ರಹಣ

ಆಗಸ್ಟ್ ೧: ಸೂರ್ಯಗ್ರಹಣ; ಅಗಸ್ಟ್ ೧೬: ಚಂದ್ರಗ್ರಹಣ

ಈ ಪಟ್ಟಿಯನ್ನು ನೋಡಿದರೆ ಏನು ಅರ್ಥವಾಗುತ್ತೆ?

೧. ಪ್ರತಿ ಗ್ರಹಣವೂ ಇನ್ನೊಂದು ಗ್ರಹಣವಾದ ಹದಿನಾಕು/ಹದಿನೈದು ದಿನಗಳಿಗೇ ಆಗುತ್ತೆ

೨. ೧೦ ಗ್ರಹಣ ಜೋಡಿಗಳಲ್ಲಿ, ಆರು ಸಲ ಸೂರ್ಯಗ್ರಹಣವಾಗಿ ಹದಿನೈದು ದಿನದ ನಂತರ ಚಂದ್ರಗ್ರಹಣ ಬಂದಿದೆ. ಇನ್ನು ನಾಕು ಸಲ ಮೊದಲು ಚಂದ್ರಗ್ರಹಣವಾಗಿ, ಮತ್ತೆ ಒಂದು ಪಕ್ಷವಾದ ನಂತರ ಸೂರ್ಯ ಗ್ರಹಣ ಬಂದಿದೆ.

ಹಾಗಾದರೆ, ಈ ಬಾರಿಯ ಗ್ರಹಣ ಅದು ಯಾವ ಮೂಲೆಯಿಂದ "ಅಪರೂಪದ ಘಟನೆ"?

ಇದು ನಿಜವಾದರೆ, ಹತ್ತು ದಿನಗಳಲ್ಲಿ ಆರು ದಿನ ನಮ್ಮ ಮನೆಗೆ ಬರುವರಿಗೆ ನಾವು ಇನ್ನು ಮೇಲೆ "ಅಪರೂಪದ ಅತಿಥಿಗಳು" ಅನ್ನಬೇಕು ಅನ್ನಿಸುತ್ತೆ!!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?