ಮರಗಳೇಕೆ ಹಣ್ಣನೀಯುವುವು?

ತೊರೆನದಿಗಳು ಕುಡಿಯವು ತಮ್ಮ ನೀರನ್ನು
ಮರಗಳಂತೂ ತಿನ್ನವು ತಮ್ಮ ಹಣ್ಣನ್ನು
ಸುರಿಸದು ಮುಗಿಲು ಮಳೆಯ ನೀರಡಿಕೆಯೆಂದು
ಪರೋಪಕಾರಕೆ ಜೀವ ಸವೆಸುವರು ಸುಜನರು

ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ!

ಮೂಲ:

ಪಿಬಂತಿ ನದ್ಯಃ ಸ್ವಯಮೇವ ನೋದಕಂ
ಸ್ವಯಂ ನ ಖಾದಂತಿ ಫಲಾನಿ ವೃಕ್ಷಾ:
ಧಾರಾದರೋ ವರ್ಷತಿ ನಾತ್ಮಹೇತವೇ
ಪರೋಪಕಾರಾಯ ಸತಾಂ ವಿಭೂತಯಃ

ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ

-ಹಂಸಾನಂದಿ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ