ಹಲ್ಲು ಕಿತ್ತ ಹಾವು

ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ!

ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ ಔದಾರಿಯಕೆ
ಇಹುದೇನು ಬೆಲೆಯು?

(ಮೂಲ: ಹಿಂದಿಯ ಪ್ರಸಿದ್ಧ ಕವಿ ರಾಮಧಾರಿ ಸಿಂಗ್ "ದಿನಕರ್" ರವರ ಕವನ .

"ಕ್ಷಮಾ ಶೋಭ್ತಿ ಉಸ್ ಭುಜಂಗ್ ಕೋ ಜಿಸ್ ಕೆ ಪಾಸ್ ಗರಲ್ ಹೋ.
ಉಸ್ ಕಾ ಕ್ಯಾ ಜೋ ದಂತ್ ಹೀನ, ವಿಶ್ ರಹಿತ್, ವಿನೀತ್, ಸರಲ್ ಹೋ
)

ಹೆಚ್ಚು ಕಡಿಮೆ ಇದೇ ತಿಳಿವು ಬರುವ ಸಂಸ್ಕೃತ ಪದ್ಯವೊಂದನ್ನೂ ಓದಿದ ಅನಿಸಿಕೆ ನನಗೆ. ಆದರೆ ಸರಿಯಾಗಿ ನೆನಪಾಗುತ್ತಿಲ್ಲ.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ