ಹಂಸನಾದ ಅಂದ್ರೇನು?

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅಂತ. ಮತ್ತೆ ಹಾಗಾದ್ರೆ "ಹಂಸನಾದ ಅಂದ್ರೇನು?" ಅಂದ್ರು. ಹ್ಹ ಹ್ಹ - ಅದೂ ಒಂದು ಒಳ್ಳೇ ರಾಗ, ಮತ್ತೆ ಅದರ ಹೆಸರಲ್ಲೂ ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಬರತ್ತೆ ಅಂದೆ.

ಅದಿರಲಿ. ಏನೋ ನೋಡ್ತಿದ್ದಾಗ ಈ ವಿಡಿಯೋ ಸಿಕ್ತು. ನೀವೂ ಕೇಳಿ ಅಂತ ಹಾಕ್ತಿದೀನಿ. ನುಡಿಸಿರೋದು ಕೊಳಲು ಮೇಧಾವಿ ಶಶಾಂಕ್. ಅಂದಹಾಗೆ, ಇವರೂ ಮೊದಲಿಗೆ ನಮ್ಮೂರಿನೋರೇ ಅನ್ನೋದು ನನಗೊಂದು ಹೆಮ್ಮೆಯೇ. ನುಡಿಸ್ತಾ ಇರೋ ರಚನೆ, ಹಂಸನಾದ ರಾಗದಲ್ಲಿರೋ ತ್ಯಾಗರಾಜರ - ಬಂಟುರೀತಿಕೊಲುವಿಯವಯ್ಯ ರಾಮ ಅನ್ನೋ ರಚನೆ.
ಹಂಸನಾದವನ್ನು ಕೇಳಿಸಿದಮೇಲೆ, ಹಂಸಾನಂದಿಗೆ ಯಾಕೆ ಮೋಸ ಮಾಡ್ಬೇಕಲ್ವಾ? ಇಲ್ಲಿ ನೋಡಿ, ಸಂಧ್ಯಾರಾಗ ಚಿತ್ರದಿಂದ ’ಈ ಪರಿಯ ಸೊಬಗು’ ಎನ್ನುವ ಪುರಂದರ ದಾಸರ ರಚನೆ. ಹಾಡಿರೋದು ಭಾರತರತ್ನ ಭೀಮಸೇನ ಜೋಶಿ ಮತ್ತು ಡಾ.ಬಾಲಮುರಳೀಕೃಷ್ಣ. ದಕ್ಷಿಣಾದಿ ಮತ್ತು ಉತ್ತರಾದಿ - ಎರಡೂ ಬಗೆಗಳ ಸಮ್ಮಿಳಿತ.
-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?