ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅನ್ನೋದು ನಿಜ ಹೇಳ್ಬೇಕಾದ್ರೆ, ಯಾವ ರೀತಿಯಲ್ಲೂ ವಾದ ಮಾಡೋ, ಪ್ರಶ್ನೆ ಮಾಡೋ ಅಂತಹ ಸಂಗತಿ ಅಲ್ವೇ ಅಲ್ಲ. ಯಾಕಂದ್ರೆ, ಎಲ್ಲ ಭಾಷೆಗಳಿಗೂ ಅವವುಗಳ ವ್ಯಾಕರಣ, ವಾಕ್ಯಗಳನ್ನ ಮಾಡುವ ಶೈಲಿ ಇದ್ದೇ ಇರುತ್ತೆ. ಇರಬೇಕು. ಇಲ್ದೇ ಹೋದ್ರೆ, ಏನಾಗುತ್ತೆ? ನಮ್ಮ ಮಾತೆಲ್ಲ ಹೋಪ್ ಲೆಸ್ ಕನ್ನಡ ಚಾನಲ್ ಗಳಲ್ಲಿ ಬರೋ ಇನ್ನೂ ಹೋಪ್ ಲೆಸ್ ಜಾಹೀರಾತುಗಳ ತರಹ ಆಗುತ್ತೆ ಅಷ್ಟೇ.

ಶಂಕರಭಟ್ಟರ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎನ್ನುವ ಪುಸ್ತಕದ ಬಗ್ಗೆ ಬಹಳ ಓದಿದ್ದರೂ, ಈ ಪುಸ್ತಕ ಓದಲು ಸಿಕ್ಕಿದ್ದು ಈಚೆಗೆ. ಇಲ್ಲಿರುವ ಹಲವು ವಿಚಾರಗಳನ್ನು ಮೊದಲೇ ಆಲ್ಲಿಲ್ಲಿ ಓದಿದ್ದುಂಟು - ಆದರೆ ಒಟ್ಟಿಗೆ ಓದುವ ಅನುಭವವೇ ಬೇರೆ.

ಇದರಲ್ಲಿ ನನಗೆ ಹಿಡಿದಿದ್ದು ಈ ಕೆಳಗಿನ ಅಂಶಗಳು - ನೆನಪಿಗೆ ಬಂದಷ್ಟನ್ನು ಮಾತ್ರ ಬರೆದಿರುವೆ:

೧. ಕನ್ನಡ ವಿಭಕ್ತಿಗಳ ಬಗ್ಗೆ ಚರ್ಚೆ - ಹೇಗೆ ಕನ್ನಡದಲ್ಲಿ ಏಳು ವಿಭಕ್ತಿಗಳು ಇಲ್ಲ (ಅಥವಾ ಬೇಕಾಗಿಲ್ಲ) ಅನ್ನುವುದನ್ನು ಅವರು ಉದಾಹರಣೆಗಳ ಸಮೇತ ಬರೆದಿರುವ ರೀತಿ.

ಹಿಂದಿನವರ ವಾದದಂತೆ ಕನ್ನಡದಲ್ಲಿ ಐದನೇ ವಿಭಕ್ತಿ ಇಲ್ಲ, ಮೂರನೇ ವಿಭಕ್ತಿ ಮಾತ್ರ ಇದೆ - ಅನ್ನುವುದರ ಬದಲಿಗೆ ಶಂಕರ ಭಟ್ಟರು ಕನ್ಡಡದಲ್ಲಿರುವ ಬಳಕೆಯನ್ನು ಐದನೇ ವಿಭಕ್ತಿ ಎಂದು ಹೇಳುವುದೇ ಒಳಿತೆಂದಿದ್ದಾರೆ.

(ಅವರು ಇದಕ್ಕೆ ಒಂದನೇ, ಎರಡನೇ, ಇತ್ಯಾದಿ ಹೆಸರು ಬಳಸಿಲ್ಲ - ಅದು ಬೇರೆ ವಿಚಾರ)

೨. ಕನ್ನಡದ ಸಮಾಸಗಳ ಮತ್ತು ಪದಕಂತೆಗಳ ಬಗ್ಗೆಯ ವಿವರಗಳು

ಸಮಾಸಗಳ ಬಗ್ಗೆ ನನಗೆ ಮೊದಲೇ ಕನ್ನಡ ಮತ್ತು ಸಂಸ್ಕೃತಗಳ ನಡುವೆ ಇರುವ ಬದಲಾವಣೆಗಳು ಗೊತ್ತಿದ್ದರೂ, ಇವರ ವಿವರಗಳು ಹೊಸದೊಂದು ಹೊಳಹನ್ನು ನೀಡಿದವು. ಇನ್ನು ಪದಕಂತೆಗಳು

೩. ಕನ್ನಡದ ’ಗುಣಪದ’ -(adjectives, ವಿಶೇಷಣ) ಗಳ ಬಗ್ಗೆಯ ವಿವರಗಳು

೪. ಕರ್ತರಿ-ಕರ್ಮಣಿ ರೂಪಗಳನ್ನು ಅವರು ಬಿಡಿಸಿರುವ ರೀತಿ

ಮತ್ತೆ ಕೃದಂತ ಮೊದಲಾದ ಇನ್ನಷ್ಟು ವಿಷಯಗಳು ತಲೆಯ-ಮೇಲೆ-ಹಾದು-ಹೋದವು (Overhead transmission Smiling - ಅದೆಲ್ಲ ಮನದಟ್ಟು ಮಾಡಿಕೊಳ್ಳೋದಕ್ಕೆ ಇನ್ನೊಂದೆರಡು ಸಲ ಓದಬೇಕಾಗುತ್ತೇನೋ.

ಅಂತೂ ಕನ್ನಡಿಗರೆಲ್ಲ ಓದಬೇಕಾದ ಪುಸ್ತಕ. ಅದು ನಿಮಗೆ ಹಿಡಿಸಲಿ, ಬಿಡಲಿ, ಕೆಲವು ವಿಷಯಗಳು ಅರಿವಿನಲ್ಲಿರೋದು ಒಳ್ಳೇದಲ್ವಾ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ