ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ

ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ):

ಶಿಕ್ಷಾ ಕ್ಷಯಂ ಗಚ್ಛತಿ ಕಾಲ ಪರ್ಯಯಾತ್
ಸುಬದ್ಧಮೂಲಾಃ ನಿಪತಂತಿ ಪಾದಪಾಃ |
ಜಲಂ ಜಲಸ್ಥಾನಗತಂ ಚ ಶುಷ್ಯತಿ
ಹುತಂ ಚ ದತ್ತಂ ಚ ತಥೈವ ತಿಷ್ಟತಿ ||

ಕೊಸರು: ಮೂಲದಲ್ಲಿ ಇರುವ ’ಈಗಿನ’ಕಾಲದ ಕ್ರಿಯಾಪದಗಳನ್ನು ನಾನು ನೇರವಾಗಿ ಕನ್ನಡಿಸಿಲ್ಲ

ಕೊ.ಕೊ: ಹುತಂ = ಹೋಮ ಮಾಡಿದ್ದು ಎಂಬ ಸಾಮಾನ್ಯ ಅರ್ಥವಾದರೂ, ಅದಕ್ಕೆ ಲೋಕಹಿತಕ್ಕಾಗಿ ಬಿಟ್ಟದ್ದು ಎನ್ನುವ ಅರ್ಥವೂ ಇದೆ. ನಾನು ಬಿಟ್ಟದ್ದು ಎಂದು ಉಪಯೋಗಿಸಿರುವುದು ಅದನ್ನೇ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ