ಅಹಿರ್ ಭೈರವ್

ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್ ಗೂ ಸ್ವರಗಳು ಒಂದೇ ಆದರೂ, ಹಾಡುವ ಶೈಲಿಯಲ್ಲಿ ವ್ಯತ್ಯಾಸ ಇದೆ.

ಈಗ ಈ ರಾಗದಲ್ಲಿ ಒಂದು ಒಳ್ಳೇ ತಿಲ್ಲಾನವನ್ನು ನೋಡಿ - ಡಾ.ಬಾಲಮುರಳಿಕೃಷ್ಣ ಅವರ ರಚನೆ.ಇದು ಹಿಂದೂಸ್ತಾನಿ ಸಂಗೀತದಿಂದ ಈಚೀಚೆಗೆ ಕರ್ನಾಟಕ ಸಂಗೀತದಲ್ಲಿ ಬಳಕೆಯಾಗುತ್ತಿರುವ ರಾಗವಾದ್ದರಿಂದ, ಇದರಲ್ಲಿ ಹೆಚ್ಚಾಗಿ ಚಿಕ್ಕ ರಚನೆಗಳು - ವಚನ-ದೇವರನಾಮ-ಭಜನ್ ಇಂತಹವುಗಳನ್ನು ಮಾತ್ರ ಹಾಡುವ ರೂಢಿ ಹೆಚ್ಚು.

ಈಗ ಇದೇ ರಾಗದಲ್ಲಿ ಒಂದು ಒಳ್ಳೇ ಚಿತ್ರ ಗೀತೆಯನ್ನು ಕೇಳಿ - ಡಾ.ರಾಜ್ ಮತ್ತು ಬೆಂಗಳೂರು ಲತಾ ಅವರ ಧ್ವನಿಯಲ್ಲಿ:ಕರ್ನಾಟಕ ಸಂಗೀತದಲ್ಲಿ ಇನ್ನೊಂದು ರಾಗ ಇದಕ್ಕೆ ಹೋಲುವಂತೆ ಇದೆ - ಅದು ಬಿಂದುಮಾಲಿನಿ ಅನ್ನುವ ರಾಗ. ತ್ಯಾಗರಾಜರ ಎಂತ ಮುದ್ದೋ ಎಂತ ಸೊಗಸೋ ಎಂಬ ರಚನೆ ಈ ರಾಗದಲ್ಲಿ ಪ್ರಸಿದ್ಧವಾಗಿದೆ. ಇದರ ಹಲವು ಸಂಚಾರಗಳು ಅಹಿರ್ ಭೈರವ್ ಅನ್ನು ಹೋಲುತ್ತವೆ.

ಒಂದು ಮುದ್ರಿಕೆ ನೋಡಿ - ಇದು ಸುಮಾರು ೨೫ ವರ್ಷಗಳ ಹಿಂದಿನದ್ದಿರಬಹುದು. ಯು.ಶ್ರೀನಿವಾಸ್ - ಆಗ ಮಾಸ್ಟರ್ ಯು.ಶ್ರೀನಿವಾಸ್ ಅಂತಿದ್ದರು - ಅವರ ಕೈಚಳಕದಲ್ಲಿ ಮ್ಯಾಂಡೊಲಿನ್ ನಲ್ಲಿ - ಎಂತ ಮುದ್ದೋ ಎಂತ ಸೊಗಸೋ. ರಾಗಾಲಾಪನೆಯಲ್ಲಿ ಅಹಿರ್ ಭೈರವ್ ನ ನೆರಳನ್ನು ಗುರುತಿಸಿ.-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ