ಧನ್ಯವಾದ ಸಮರ್ಪಣೆ

ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ ನೆರವಾದ ಎಲ್ಲ ಸಂಪದಿಗರಿಗೂ ನನ್ನ ಧನ್ಯವಾದಗಳು.

ಈ ಸಂದರ್ಭದಲ್ಲಿ ಇನ್ನೊಬ್ಬರು ಮಹನೀಯರನ್ನು ನಾನು ನೆನೆಯಲೇ ಬೇಕು. ಅವರೇ ಟೊರಾಂಟೋನಲ್ಲಿರುವ ಶ್ರೀ ಲಕ್ಷ್ಮಣ್. ನಾವು ತಿದ್ದುಪಡಿ ಮಾಡಿ ಇಲ್ಲಿ ಹಾಕಲು ಉಪಯೋಗಿಸಿದ್ದು ಅವರು ಕೊಟ್ಟ ಇ-ಟೆಕ್ಸ್ಟ್. ಸಂಗೀತ ರಚನೆಗಳ ಬಗ್ಗೆ ಅತೀವ ಆಸಕ್ತರಾದ ಅವರು ಕರ್ನಾಟಕ ಸಂಗೀತದಲ್ಲಿ ಹಾಡುವ ಹಾಡಿರಬಹುದಾದ, ಹಾಡಬಹುದಾದ ಸಾವಿರಾರು ರಚನೆಗಳನ್ನು e-text ಆಗಿ ತಂದಿದ್ದ್ದಾರೆ. ಶ್ರೀ ಲಕ್ಷ್ಮಣ್ ಅವರು ಕೊಟ್ಟ ದಾಸರ ಹಾಡುಗಳ ಡೇಟಾಬೇಸ್ ಇಂಗ್ಲಿಷ್ ಲಿಪಿಯಲ್ಲಿತ್ತು. ಮತ್ತು ಲಕ್ಷ್ಮಣ್ ಅವರಿಗೆ ಸ್ವತಃ ಕನ್ನಡ ಬರದಿರುವ ಕಾರಣ ಕೆಲವು ತಪ್ಪುಗಳೂ ನುಸುಳಿದ್ದವು. ಆದರೆ, ಈ ಇ-ಟೆಕ್ಸ್ಟ್ ಇದ್ದಿದ್ದರಿಂದ ಕನ್ನಡದಲ್ಲಿ ಟೈಪಿಸುವ ಕೆಲಸ ಎಷ್ಟೋ ಮಟ್ಟಿಗೆ ಸುಲಭವಾಯಿತು ಅಂತ ಹೇಳಬೇಕು.

ಇದರ ಬಗ್ಗೆ ಇನ್ನೊಂದುಚೂರು ವಿವರವಾಗಿ ಇಲ್ಲಿ ಬರೆದಿರುವೆ - ಆಸಕ್ತರು ನೋಡಬಹುದು: http://neelanjana.wordpress.com/2009/04/06/thanksgiving-in-april/

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?