ಮುಂಗಾರು ಮಳೆ

ನಾನು ತುಂಬಾ ಚಿಕ್ಕ ಹುಡುಗನಾಗಿದ್ದಾಗ ನಮ್ಮ ಮನೇಗೆ ಬರ್ತಿದ್ದ ರೈತರು ಕಾರು ಹಬ್ಬ ಇದೆ ಅಂತ ಹೇಳ್ತಿದ್ದನ್ನ ಕೇಳಿದ್ದೆ. ಆದ್ರೆ ನಮ್ಮ ಹಳ್ಳೀಗೆ ಆಗ ಕಾರಿರಲಿ, ಆಟೋ ಕೂಡ ಹೋಗ್ತಿರಲಿಲ್ಲ. ಇದೇನಿದು ಕಾರು ಹಬ್ಬ ಅಂದ್ರೆ ಅಂತ ಆಶ್ಚರ್ಯ ಆಗ್ತಿತ್ತು. ಪುಣ್ಯಕ್ಕೆ ನಾನು ಸ್ಕೂಲಲ್ಲಿ ಕನ್ನಡ ಓದ್ತಿದ್ದೆನಾದ್ದರಿಂದ, ಕಾರು ಹಬ್ಬ ಅಂದ್ರೆ ಮಳೆಗೆ ಸಂಬಂಧಿಸಿದ ಹಬ್ಬ ಅಂತ ತಿಳೀತು ಅನ್ನಿ.

ಕೆಲವು ವರ್ಷಗಳ ಹಿಂದೆ ಕಾಮೆಡಿ ಟೈಮ್ ಗಣೇಶನ ... ಅಬ್ಬಬ್ಬ ಬಾಯ್ತಪ್ಪಿದೆ. ಕ್ಷಮಿಸಿ. ಗೋಲ್ಡನ್ ಸ್ಟಾರ್ ಗಣೇಶನ ’ಮುಂಗಾರು ಮಳೆ’ ಬಂದಾಗ ಅದರ ರಿವ್ಯೂಗಳಲ್ಲಿ ’ಮುಂಗಾರು ಮಳೆ’ ಅಂದ್ರೆ 'pre-monsoon showers' ಅನ್ನೋ ಅನುವಾದ ನೋಡಿ ಸುಸ್ತಾಗಿದ್ದೆ ನಾನು. ನಂಗೆ ಗೊತ್ತಿದ್ದ ಹಾಗೆ, ಯುಗಾದಿ ಹಬ್ಬದ ಹೊತ್ತಿಗೆ, ಮುಂಗಾರಿಗೆ ಮೊದಲು ಬರೋ ಪ್ರಿ-ಮಾನ್ಸೂನ್ ಮಳೆಗೆ ಅಡ್ಡ ಮಳೆ ಅಂತಿದ್ವಿ ನಮ್ಮ ಕಡೆ. ಯೋಗರಾಜಭಟ್ಟರ ಮುಂಗಾರುಮಳೆಗೆ ಅರ್ಥ ಬೇರೆ ಇರಬಹುದು ಬಿಡಿ.

ಅದಿರಲಿ. ಈ ಸಲ ಮುಂಗಾರು ಮಳೆ ಚುರುಕಾಗೋ ಕಾಲದಲ್ಲಿ ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಸ್ವಲ್ಪ ಸುತ್ತಾಟ ಮಾಡಿದ್ದಾಯಿತು. ಅಲ್ಲಿಯ ಕೆಲವು ಚಿತ್ರಗಳನ್ನ ನೋಡಿ ಇಲ್ಲಿ:

ಹಾಸನ ಪೇಟೆ - ಮಳೆ ಬೀಳುವಾಗ ಬಸ್ಸಿನ ಒಳಗಿಂದ - ಬಿಸಿಲೇ ಇರಲಿ ಮಳೆಯೇ ಇರಲಿ, ನಮ್ಮೂರೆ ನಮಗೆ ಚೆನ್ನ!

ಇಪ್ಪತ್ತು ರುಪಾಯಿಗೆ ಮಾರು ಶಾವಂತಿಗೆ:

ಬಾನಿಗೆ ಮೋಡದ ಸಿಂಗಾರ, ನಮಗೆ ಹೂವಿನ ಅಲಂಕಾರ - ಮದುವೆಯ ವೈಭವಕ್ಕೆ ಸಜ್ಜಾದ ಉತ್ಸವಮೂರ್ತಿಗಳು, ಕೌಶಿಕ:

ಪ್ರಯಾಣಿಕರಿಗೆ ಕಾಯುತ್ತಿರುವ ಹರಿಗೋಲು - ಶ್ರೀರಂಗಪಟ್ಟಣದ ಬಳಿ:

ತೆಳು ಮೋಡದ ನಡುವೆ ತಾಯಿ ಚಾಮುಂಡಿಯ ಗುಡಿ:

ಆಕಾಶಕ್ಕೊಂದು ಏಣಿ?

ರಾಜ ಯಾರು ಆದ್ರೇನು? ರಾಗಿ ಬೀಸೋದು ತಪ್ಪೋಲ್ಲ. ಮಳೆಗಾಳಿ ಇದ್ರೇನು? ಸಮಯ ಓಡೋದ್ ನಿಲ್ಲಲ್ಲ!

ಸಂತ ಫಿಲೋಮಿನಾ ಚರ್ಚ್, ಮೈಸೂರು:

ಮೋಡ ಮೊರೆಯುತ್ತಿದ್ದರೂ ನಾನಂತೂ ಕಲ್ಲುಕಂಬದ ಹಾಗೇ ನಿಲ್ಲುವೆ Smiling

ಮಳೆಗಾಳಿಗೆಲ್ಲ ಅಂಜೋರಲ್ಲ ಬಿಡಿ ನಾವು!


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ