ಲಾಂಟಾನಾಒಂದೊಂದು ಸಲ ಆಶ್ಚರ್ಯ ಆಗುತ್ತೆ. ’ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ” ಅಂತ ಕನಕದಾಸರೇ ಹೇಳಿದಾರಲ್ಲ! ಊರು ಕೇರಿ ದಾಟಿ ಬೇರೆ ಯಾವ್ದೋ ದೇಶದಲ್ಲಿ ಹರಡಿಕೊಂಡಿರೋ ಜೀವಿಗಳ ಪೈಕಿ ಲಾಂಟಾನಾ ಕೂಡ ಒಂದು. ಇದು ಮೊದಲಿಗೆ ದಕ್ಷಿಣ ಅಮೇರಿಕಾದ ಗಿಡವಂತೆ. ಪಾಪ, ಕ್ಯಾಲಿಫೋರ್ನಿಯಾದಲ್ಲಿ, ರಸ್ತೆ ನಡುವೆ ಸಿಂಗಾರಕ್ಕೆ ನೆಟ್ಟು, ನೀರುಹಾಕಿ ಬೆಳಸ್ತಾರೆ. ಆದ್ರೆ, ಕರ್ನಾಟಕದಲ್ಲಿ ಇದು ತಂತಾನೇ ಯಾವ ಆರೈಕೆ ಇಲ್ಲದೆ ಬೆಳೆದು ಬಗೆ ಬಗೆ ಬಣ್ಣ ಬಣ್ಣದ ಹೂವನ್ನೂ ತಳೆಯುತ್ತೆ. ಇಷ್ಟು ಬಣ್ಣವಾದ ಹೂವಿರೋ ಗಿಡದ ಎಲೆ ಮುಟ್ಟಿದರೆ ಮೈ ಕಡಿತ ಹತ್ತಬಹುದು. ಅದಕ್ಕೇ ಈ ಗಿಡಕ್ಕೆ, ತರುಚೀ ಗಿಡ ಅಂತಲೂ ಹೇಳೋದು ಕೇಳಿದೀನಿ. ಸೃಷ್ಟಿ ಎಷ್ಟು ವಿಚಿತ್ರ ಅಲ್ವೇ?

(ಇಲ್ಲಿರುವ ಲಾಂಟಾನಾ ಗಿಡದ ಚಿತ್ರ ತೆಗೆದದ್ದು ನಾನೇ - ಮಾವಿನಕೆರೆ ಬೆಟ್ಟದಲ್ಲಿ. ಜುಲೈ ೨೦೦೯)

-ಹಂಸಾನಂದಿ