’ಸಿಟಿ’ಯ ಸುತ್ತ ಒಂದು ಸುತ್ತು

ಕಳೆದ ವಾರ ಮನೆಗೆ ಬಂದ ನೆಂಟರ ಜೊತೆ ಒಂದು ಸಲ ಸಿಟಿ ಯಾತ್ರೆ ಮಾಡಿದ್ದಾಯಿತು. ಮನೆಗೆ ಯಾರಾದರೂ ಗೆಳೆಯರು, ನೆಂಟರು ಬಂದಾಗ ’ಸಿಟಿ’ಯನ್ನು ತೋರಿಸಲು ಹೋಗುವುದು ರೂಢಿ.ಎಷ್ಟು ಸಲ ಹೋದರು ಪ್ರತೀ ಸಲ ಹೋಗುವಾಗ ಎಲ್ಲಿ ದಾರಿ ತಪ್ಪುವುದೋ ಅನ್ನುವ ಮುಜುಗರ ಇರುವುದೇ. ಯಾಕಂದ್ರೆ ಅಲ್ಲಿಯ ರಸ್ತೆಗಳೇ ಹಾಗೆ! ಎಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗುವ ಒನ್-ವೇ ಗಳು, ಅದಕ್ಕೂ ಹೆಚ್ಚಾಗಿ ಇದ್ದಕ್ಕಿದ್ದ ಹಾಗೆ ಬೆಟ್ಟದ ಮೇಲೆ ಹತ್ತಿಬಿಡುವ, ಇಳಿದು ಬಿಡುವ ರಸ್ತೆಗಳು. ಇನ್ನು ಪಾರ್ಕಿಂಗ್ ಹುಡುಕುತ್ತಲೇ ಸುತ್ತಿಸುತ್ತಿ ಸುಣ್ಣವಾಗಬೇಕಾದಂತಹ ರಸ್ತೆಗಳು, ಇವೆಲ್ಲ ನೆನಪಾಗಿ ಹೋಗುವುದೇ ಬೇಡವೇ ಅಂತ ಅನ್ನಿಸುವುದೂ ಉಂಟು.

ಈ ಬಾರಿ ಪ್ರತೀ ಸಲದ ದಾರಿ ಬಿಟ್ಟು ಹೋದರೂ, ದಾರಿ ಎಲ್ಲೂ ತಪ್ಪದೇ ಹೋಗಿದ್ದು ಹೆಚ್ಚಾಯವೇ. ಅವತ್ತು ಸ್ಟಿಯರಿಂಗ್ ಹಿಂದಿನಿಂದ ತೆಗೆದ ಚಿತ್ರಗಳಲ್ಲಿ ಕೆಲವನ್ನು ಹಾಕಿರುವೆ (ಗಾಜಿನ ಹಿಂದೆ ತೆಗೆದಿರುವುದರಿಂದ ಕೆಲವು ಮಸುಕಾಗಿಯೂ ಇವೆ), ನೋಡಿ.

ಎಂಬಾರ್ಕೆಡೆರೋ ನಿಂದ ’ಸಿಟಿ’ಯ ಗಗನಚುಂಬಿಗಳು

ಒಂದು ರಸ್ತೆ - ಒಂದಕ್ಕೊಂದು ಅಂಟಿದಂತಿರುವ ಮನೆಗಳನ್ನ ಗಮನಿಸಿ:
ಚೈನಾ ಟೌನ್ - ಚೈನೀಸ್ ಬರಹವನ್ನ ನೋಡಿ. ಇಲ್ಲಿ ಮುಕ್ಕಾಲುಪಾಲು ವ್ಯಾಪಾರಿಗಳಿಗೆ ಇಂಗ್ಲಿಷ್ ಸ್ವಲ್ಪವೂ ಬರೋದಿಲ್ಲ!
ಗೋಲ್ಡನ್ ಗೇಟ್ ಸೇತುವೆ - ಮಟಮಟ ಮಧ್ಯಾಹ್ನ ದಲ್ಲಿ ಕವಿಯುತ್ತಿರುವ ಬೇಸಿಗೆ ಕಾವಳ:ಗೋಲ್ಡನ್ ಗೇಟ್ ಸೇತುವೆಯ ಇನ್ನೊಂದು ನೋಟ:

ಮಾರ್ಕೆಟ್ ಸ್ಟ್ರೀಟ್:ಮಾರ್ಕೆಟ್ ಸ್ಟ್ರೀಟ್ ನ ಇನ್ನೊಂದು ನೋಟ:
ಅಂದ ಹಾಗೆ ಯಾವ ’ಸಿಟಿ’ ಅಂತಲೇ ಹೇಳಲಿಲ್ಲ ಅಂದಿರಾ? ಹಾಸನದಲ್ಲಿ ನರಸೀಪುರಕ್ಕೆ ಹೋಗೋದು ಅಂದ್ರೆ ಹೊಳೇನರಸೀಪುರಕ್ಕೆ ಅಂತಲೇ ಅರ್ಥ. ಅದೇ ಮೈಸೂರಿನವರು ನರಸೀಪುರಕ್ಕೆ ಹೋಗ್ತೀನಿ ಅಂದ್ರೆ, ತಿರುಮಕೂಡ್ಲು ನರಸೀಪುರಕ್ಕೆ ಅನ್ನೋದೇ ಅರ್ಥ. ಹಾಗೇ, ಇಲ್ಲಿ ಬೇ ಪ್ರದೇಶದಲ್ಲಿ ಯಾರಾದ್ರೂ "I'm going to the city" ಅಂದ್ರೆ, ಅದು ಸ್ಯಾನ್ ಫ್ರಾನ್ಸಿಸ್ಕೋ ಅಂತ ಮತ್ತೆ ಹೇಳ್ಬೇಕಾಗಿಲ್ವಲ್ಲ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ