ಹೀಗೊಂದು ಪ್ರಶ್ನೋತ್ತರ: ಸುಮ್ಮನೆ, ತಮಾಷೆಗೆ..

ಮೊನ್ನೆ ನಾನು ಓದಿದ ಬರಹವೊಂದು ಇದಕ್ಕೆ ಪ್ರೇರೇಪಣೆ. ಪೂರ್ತಿ ಅರ್ಥವಾಗೋದಕ್ಕೆ, ಕರ್ನಾಟಕ ಸಂಗೀತದ ಸ್ವಲ್ಪ ಪರಿಚಯ ಬೇಕಾಗಬಹುದೇನೋ :)

ಪ್ರಶ್ನೆ: ಅಯ್ಯಂಗಾರ್ ಬೇಕರಿಗಳಲ್ಲಿರೋವ್ರಿಗೆ ಬಹಳ ಇಷ್ಟವಾಗೋ ರಾಗ ಯಾವುದು?
ಉತ್ತರ: ವನಸ್ಪತಿ

ಪ್ರಶ್ನೆ: ಮಹೇಂದರ್ ಹೊಸ ಸಿನೆಮಾ ಮಾಡಿದರೆ, ಅದರಲ್ಲಿ ಹಾಡುಗಳು ಚೆನ್ನಾಗಿರೋಲ್ಲ, ಯಾಕೆ?
ಉತ್ತರ: ಯಾಕಂದ್ರೆ, ಅವರೀಗ ಶ್ರುತಿ ಬಿಟ್ಟು ಹಾಡ್ಬೇಕಾಗತ್ತೆ

ಪ್ರಶ್ನೆ: ಸಂಶೋಧಕ ಚಿದಾನಂದ ಮೂರ್ತಿ ಅವರ ಅಚ್ಚುಮೆಚ್ಚಿನ ರಾಗ ಯಾವ್ದು?
ಉತ್ತರ: ಕನ್ನಡ

ಪ್ರಶ್ನೆ: ಸಂಗೀತಗಾರನ ಹೆಂಡ್ತೀಗೆ ಮಿತಿ ಮೀರಿದ ಕೋಪ ಯಾಕೆ ಬಂತು?
ಉತ್ತರ: ಯಾಕಂದ್ರೆ ಅವನು ಹಾಡಿದ್ದು "ನಿಮಮ ದಪ, ನಿಮಪ ದಪ, ನೀ.. ದಪ" ಅಂತ

ಪ್ರಶ್ನೆ: ಟೆಲಿಸ್ಕೋಪ್ ಇಟ್ಕೊಂಡೋರ್ಗೆ ಇಷ್ಟವಾಗೋ ರಾಗಗಳನ್ನು ಹೆಸರಿಸಿ
ಉತ್ತರ: ಮಂಗಳಕೈಶಿಕಿ, ಬುಧಮನೋಹರಿ, ಗುರುಪ್ರಿಯ ಇತ್ಯಾದಿ....

ಪ್ರಶ್ನೆ: ಪಿ ಟಿ ಉಷಾ ಸ್ಪರ್ಧೆಗಳಲ್ಲಿ ಓಡೋ ಮೊದಲು ಕೇಳ್ತಿದ್ದ ರಾಗ ಯಾವುದು?
ಉತ್ತರ: ವೇಗವಾಹಿನಿ

ಪ್ರಶ್ನೆ: ಅಭಿನವ್ ಭಿಂದ್ರಾಗೆ ತುಂಬಾ ಇಷ್ಟವಾಗೋ ರಾಗಗಳು ಯಾವುದು?**
ಉತ್ತರ: ಮಾರರಂಜಿನಿ, ಚಾರುಕೇಶಿ, ಸರಸಾಂಗಿ, ಹರಿಕಾಂಭೋಜಿ, ಶಂಕರಾಭರಣ ಮತ್ತೆ ನಾಗಾನಂದಿನಿ

ಪ್ರಶ್ನೆ: ಆಕಾಶದಲ್ಲಿ ದುರ್ಬೀನು ಇಟ್ಕೊಂಡು ನೋಡೋ ವಿಜ್ಞಾನಗಳಿಗೆ ಯಾವ ರಾಗಗಳನ್ನ ಕಂಡರಾಗೋದಿಲ್ಲ?
ಉತ್ತರ: ಚಂದ್ರಿಕಾ, ಪೂರ್ಣಚಂದ್ರಿಕಾ, ಸೂರ್ಯಕಾಂತ , ಚಂದ್ರಜ್ಯೋತಿ

ಪ್ರಶ್ನೆ: ಸೂರ್ಯ ಗ್ರಹಣದ ದಿನ ಹಾಡೋದಕ್ಕೆ ಯಾವ ರಾಗ ಸೂಕ್ತ?
ಉತ್ತರ: ರವಿಚಂದ್ರಿಕಾ
(ಕೃಪೆ: ಪವನ್ ಕೇಶವಮೂರ್ತಿ)

ಪ್ರಶ್ನೆ: ಫಿಸಿಕ್ಸ್ ಹೇಳ್ಕೊಡೋವ್ರಿಗೆ ಮೆಚ್ಚಿಗ ಆಗೋ ರಾಗ ಯಾವುದು?
ಉತ್ತರ: ಆಂದೋಳಿಕ

ಪ್ರಶ್ನೆ: Procter and Gamble, Hindustan Lever ಮೊದಲಾದ ಕಂಪನೀಗಳಲ್ಲಿ ಜಾಸ್ತಿ ಹಾಡೋ ರಾಗ ಯಾವ್ದು?
ಉತ್ತರ: ಧವಳಾಂಬರಿ

ಪ್ರಶ್ನೆ: ಅಲರ್ಜಿ, ಆಸ್ತಮಾ ಮೊದಲಾದುವು ಇರೋವ್ರ ಮುಂದೆ ಯಾವ ರಾಗ ಹಾಡಬಾರದು?
ಉತ್ತರ: ವಸಂತ, ಶುದ್ಧವಸಂತ, ಹಿಂದೋಳವಸಂತ, ವಸಂತಭೈರವಿ ಇತ್ಯಾದಿ

ಪ್ರಶ್ನೆ: ಕಳ್ಳಕಾಕರಿಗೆ ಪ್ರೀತಿಯ ರಾಗ ಯಾವ್ದು?
ಉತ್ತರ: ಟಕ್ಕ

ಪ್ರಶ್ನೆ: ಕೈಲಾಸವಾಸಿ ಶಿವನ ಪ್ರೀತಿಯ ರಾಗಗಳು ಯಾವುದು?
ಉತ್ತರ: ಗೌರಿ ಮತ್ತೆ ಗಂಗಾತರಂಗಿಣಿ

-ಹಂಸಾನಂದಿ

** - ಇದು ಸ್ವಲ್ಪ ಟೆಕ್ನಿಕಲ್ ಪ್ರಶ್ನೆ!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?