ಮುಕುಂದಾಷ್ಟಕ
ಅಂಗೈದಾವರೆಯಿಂದಂಗಾಲತಾವರೆಯನ್ನು
ಮೊಗದತಾವರೆಯೊಳಗೆ ಇರಿಸಿದವನ
ತೆರೆದಾಲದೆಲೆ ಮೇಲೆ ತಾ ಪವಡಿಸಿರುವ
ಎಳೆಯ ಮುಕುಂದನನು ನೆನೆವೆ ಮನದಲ್ಲಿ ||೧||

ಲೋಕಗಳ ಕೊನೆಗೊಳಿಸಿ ಆಲದೆಲೆಮೇಲೆ
ಮಲಗಿಹನ ಕೊನೆಮೊದಲೆರಡೂ ಇlಲ್ಲದವನ
ಎಲ್ಲರೊಡೆಯನ ನಮ್ಮ ಒಳಿತಿಗೈತಂದಿರುವ
ಮುದ್ದು ಮುಕುಂದನನು ನಾನು ನೆನೆವೆ ಮನದಲ್ಲಿ ||೨||

ಕನ್ನೈದಿಲೆಯ ತೆರದ ನವಿರು ಮೈಯವನ
ದೇವದೇವತೆಗಳಾದರಿಸಿದ ಪಾದ ಕಮಲನ
ಆಸರೆಯಲಿರುವರಿಗೆ ಕೇಳಿದೆಲ್ಲವ ಕೊಡುವ
ಪುಟ್ಟ ಮುಕುಂದನನು ನಾನು ನೆನೆವೆ ಮನದಲ್ಲಿ ||೩||

ಎಸೆವ ಮುಂಗುರುಳವನ ಸರಗಳಲಿ ಮೆರೆಯುವನ
ಸಿಂಗರದಿ ಮೂಡಿರುವ ಸುಲಿಪಲ್ಲ ಚೆಲುವನ
ತೊಂಡೆ ತುಟಿ ಸೊಗಸಿನ ಅಗಲ ಕಂಗಳಿಹ
ಕೂಸು ಮುಕುಂದನ ನಾನು ನೆನೆವೆ ಮನದಲ್ಲಿ ||೪||

ಹೊರಹೋದ ಗೋಪಿಯರ ಮನೆಗಳಲಿರುವ
ನಿಲುವಿನ ಹಾಲ್ಬೆಣ್ಣೆ ಮೊಸರುಗಳೆಲ್ಲವನು
ಮನಸಾರೆ ತಿಂದು ಕಪಟದಿ ನಿದ್ದೆಯಗೈವ
ಕಳ್ಳ ಮುಕುಂದನನು ನಾನು ನೆನೆವೆ ಮನದಲ್ಲಿ ||೬||

ಯಮುನೆಯೊಳಡಗಿದ್ದ ಘೋರ ಕಾಲಿಯನ
ಹೆಡೆಮೇಲೆ ಕುಣಿದು ನಲಿದದರ ಬಾಲವನೇ
ಕೈಲಿ ಹಿಡಿದವವನ ಚಂದಿರನ ಮೊಗದವನ
ಬಾಲ ಮುಕುಂದನ ನಾನು ನೆನೆವೆ ಮನದಲ್ಲಿ ||೬||

ಒರಳುಕಲ್ಲಿಗೆ ಕಟ್ಟಿಸಿಕೊಂಡ ಉದಾರಿ ಶೌರಿಯ
ಮತ್ತಿ ಮರ ಜೋಡಿಯನು ಕೆಡಹಿಬೀಳಿಸಿದನ
ಅರಳಿರುವ ತಾವರೆಯ ದಳದಗಲ ಕಣ್ಣಿರುವ
ಪೋರ ಮುಕುಂದನನು ನೆನೆವೆ ಮನದಲ್ಲಿ ||೭||

ಮೊಲೆಹಾಲ ಕುಡಿಯುತಲಿ ತಾಯ ಮೊಗವನ್ನು
ಆದರದಿ ನೋಡುತಿಹ ಕಮಲ ಕಣ್ಣವನ
ಮೊದಲಿಗನ ಚಿನ್ಮಯನ ಅಳವು ಮೀರಿದನ
ಕಂದ ಮುಕುಂದನ ನಾನು ನೆನೆವೆ ಮನದಲ್ಲಿ ||೮||

ಸಂಸ್ಕೃತ ಮೂಲ:

ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 1 ||

ಸಂಹೃತ್ಯ ಲೋಕಾನ್ವಟಪತ್ರ ಮಧ್ಯೇ
ಶಯಾನಮಾದ್ಯಂತವಿಹೀನ ರೂಪಮ್|
ಸರ್ವೇಶ್ವರಂ ಸರ್ವಹಿತಾವತಾರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 2 ||

ಇಂದೀವರ ಶ್ಯಾಮಲ ಕೋಮಲಾಂಗಂ
ಇಂದ್ರಾದಿ ದೇವಾರ್ಚಿತ ಪಾದಪದ್ಮಮ್ |
ಸಂತಾನ ಕಲ್ಪದ್ರುಮಮಾಶ್ರಿತಾನಾಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 3 ||

ಲಂಬಾಲಕಂ ಲಂಬಿತ ಹಾರಯಷ್ಟಿಂ
ಶೃಂಗಾರ ಲೀಲಾಂಕುರ ದಂತಪಂಕ್ತಿಮ್ |
ಬಿಂಬಾಧರಾ ಪೂರಿತ ವೇಣುನಾದಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 4 ||

ಶಿಕ್ಯೇ ನಿಧಾಯಾಜ್ಯ ಪಯೋದಧೀನಿ
ಕಾರ್ಯಾಂಗತಾಯಾಂ ವ್ರಜನಾಯಿಕಾಯಾಮ್ |
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 5 ||

ಕಲಿಂದಜಾಂತಸ್ಥಿತ ಕಾಲಿಯಸ್ಯ
ಫಣಾಗ್ರರಂಗೇ ನಟನಪ್ರಿಯಂತಮ್
ತತ್ಪುಚ್ಛ ಹಸ್ತಂ ಶರದಿಂದು ವಕ್ತ್ರಮ್
ಬಾಲಂ ಮುಕುಂದಂ ಮನಸಾ ಸ್ಮರಾಮಿ || 6 ||

ಉಲೂಖಲೇ ಬದ್ಧಮುದಾರ ಶೌರ್ಯಂ
ಉತ್ತುಂಗ ಯುಗ್ಮಾರ್ಜನಭಂಜನತಮ್ |
ಉತ್ಫಲ್ಲ ಪದ್ಮಾಯತ ಚಾರುನೇತ್ರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 7 ||

ಆಲೋಕ್ಯ ಮಾತುರ್ಮುಖಮಾದರೇಣ
ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ |
ತಂ ಚಿನ್ಮಯಂ ದೇವಮನಂತಮಾದ್ಯಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 8 ||

ಏತನ್ಮುಕುಂದಾಷ್ಟಕಮಾದರೇಣ
ಸಕೃತ್ ಪಠೇದ್ಯಃ ಸ ಲಭೇತನ್ಮರ್ತ್ಯಃ |
ಜ್ಞಾನಂಪರಂ ಪಾಪಹರಂ ಪವಿತ್ರಂ
ಆಯುಷ್ಯ ವಿದ್ಯಾಂಚ ಯಶಸ್ತಥೈವ ||

करारविन्देन पदारविन्दं मुखारविन्दे विनिवेशयन्तम् ।
वटस्य पत्रस्य पुटे शयानं बालं मुकुन्दं मनसा स्मरामि ॥१॥

संहृत्य लोकान्वटपत्रमध्ये शयानमाद्यन्तविहीनरूपम् ।
सर्वेश्वरं सर्वहितावतारं बालं मुकुन्दं मनसा स्मरामि ॥२॥

इन्दीवरश्यामलकोमलांगं इन्द्रादिदेवार्चितपादपद्मम् ।
सन्तानकल्पद्रुममाश्रितानां बालं मुकुन्दं मनसा स्मरामि ॥३॥

लम्बालकं लम्बितहारयष्टिं शृंगारलीलांकितदन्तपङ्क्तिम् ।
बिंबाधरं चारुविशालनेत्रं बालं मुकुन्दं मनसा स्मरामि ॥४॥

शिक्ये निधायाद्यपयोदधीनि बहिर्गतायां व्रजनायिकायाम् ।
भुक्त्वा यथेष्टं कपटेन सुप्तं बालं मुकुन्दं मनसा स्मरामि ॥५॥

कलिन्दजान्तस्थितकालियस्य फणाग्ररंगे नटनप्रियन्तम् ।
तत्पुच्छहस्तं शरदिन्दुवक्त्रं बालं मुकुन्दं मनसा स्मरामि ॥६॥

उलूखले बद्धमुदारशौर्यं उत्तुंगयुग्मार्जुन भंगलीलम् ।
उत्फुल्लपद्मायत चारुनेत्रं बालं मुकुन्दं मनसा स्मरामि ॥७॥

आलोक्य मातुर्मुखमादरेण स्तन्यं पिबन्तं सरसीरुहाक्षम् ।
सच्चिन्मयं देवमनन्तरूपं बालं मुकुन्दं मनसा स्मरामि ॥८॥

-ಹಂಸಾನಂದಿ

ಕೊ: ಮೂಲದಿಂದ ಕೆಲವು ಸಣ್ಣ ಪುಟ್ಟ ಪದಗಳ ಬದಲಾವಣೆ ಮಾಡಿರುವೆನಾದರೂ ಭಾವದಲ್ಲಿ ಹೆಚ್ಚಾಗಿಬದಲಾವಣೆ ಆಗಿಲ್ಲವೆಂದು ನನ್ನೆಣಿಕೆ .

ಚಿತ್ರ: http://www.hindugemeinde.de/ ಕೃಪೆ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ