ಒಂದು ಹನಿ


"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ
ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!"
ಇನಿಯ ನುಡಿದಿರಲಿಂತು ಮರುಮಾತನಾಡದೆಯೆ
ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ!

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩೫  ):

ಸುತನು ಜಹಿಹಿ ಕೋಪಂ ಪಶ್ಯ ಪಾದನತಂ ಮಾಮ್
ನ ಖಲು ತವ ಕದಾಚಿತ್ಕೋಪ ಏವಮ್ ವಿಧೋಭೂತ್
ಇತಿ ನಿಗದತಿ ನಾಥೇ ತಿರ್ಯಗಾಮೀಲಿತಾಕ್ಷ್ಯಾ
ನಯನಜಲಮನಲ್ಪಮ್ ಮುಕ್ತಮುಕ್ತಮ್ ನ ಕಿಂಚಿತ್

-ಹಂಸಾನಂದಿ

ಕೊ: ಈ ಪದ್ಯದ ಒಂದೆರಡು ಸಾಲು ಅನುವಾದ ಮಾಡಿಟ್ಟು ೪ ವರ್ಷಗಳೇ ಕಳೆದಿವೆ ಅನ್ನುವುದು ನೋಡಿ, ಇವತ್ತು ಪೂರ್ತಿ ಮಾಡಿದೆ :)

ಕೊ.ಕೊ: ಅಮರು ಶತಕದಲ್ಲಿ, ಪ್ರಿಯೆಯ ಕೋಪವನ್ನು ತಗ್ಗಿಸಲು ಅವಳ ಕಾಲಿಗೆ ಬೀಳುವ ಹಲವು ದೃಷ್ಟಾಂತಗಳಿವೆ. ಅವುಗಳಲ್ಲಿ ಇದೊಂದು.

ಕೊ.ಕೊ.ಕೊ: ಹಿಂದೂಸ್ತಾನಿ ಸಂಗೀತದ ರಾಗ ರಾಮಕಲಿಯ ರಾಗಿಣಿಯನ್ನು ಚಿತ್ರಿಸುವ ಈ ರಾಗಮಾಲಾ ಚಿತ್ರ ಈ ಅನುವಾದಕ್ಕೆ ಸೂಕ್ತವಾಗಿ ಕಂಡಿದ್ದರಿಂದ ಅದನ್ನೇ ಬಳಸಿಕೊಂಡೆ. ಸುಮಾರು ೫೦೦ ವರ್ಷ ಹಿಂದೆ ಚಿತ್ರಿತವಾ ಇದು,  $4000 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ!

ಚಿತ್ರದ ಮೂಲ ಇಲ್ಲಿಂದ:  http://www.bonhams.com/auctions/21787/lot/104/Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?