ಹೆಂಡತಿಯೊಬ್ಬಳು ಮನೆಯಲಿರದಿದ್ದರೆ...ಕಮಲದಾ ಮೊಗದವನೆ
ಕಮಲದಾ ಕಣ್ಣವನೆ
ಕಮಲಜನ ಹೊಕ್ಕುಳಲಿ ಹಡೆದಿರುವನೇ
ಸುಮನಸನೆ  ನಿನ್ನಂದ-
ದಮಲ ಮುಖ ಕಂದಿದ್ದು    
ಕಮಲೆ  ಬಳಿಯಿಲ್ಲೆಂಬ ದುಗುಡದಲ್ಲೇ ?

-ಹಂಸಾನಂದಿಕೊ: ಕಮಲೆ = ಕಮಲದಲ್ಲಿ ನೆಲೆನಿಂತವಳು, ಲಕ್ಷ್ಮಿ. ಕಮಲಜ=ಬ್ರಹ್ಮ.

ಕೊ.ಕೊ: ಪದ್ಯಪಾನದಲ್ಲಿ ಈ ಚಿತ್ರವನ್ನು ಕೊಟ್ಟು ಅದರ ಬಗ್ಗೆ ಒಂದು ಛಂದೋಬದ್ಧವಾದ ಕವಿತೆ ಬರೆಯಲು ಕೇಳಿದ್ದರು. ಅದಕ್ಕೆಂದು ಕುಸುಮ ಷಟ್ಪದಿಯಲ್ಲಿ ಒಂದು ಪ್ರಯತ್ನ ಇದು

ಕೊ.ಕೊ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರುಪಾಯಿ ಅಂತ ಹಾಡಿದ್ದು ಬರೀ ಕೆ ಎಸ್ ನ ಒಬ್ಬರೇ ಅಲ್ಲ, ಆ ಮುಂಚೇನೂ ಎಷ್ಟೋ ಜನ ಅದನ್ನ ಒಪ್ಪಿಕೊಂಡಿದ್ದಾರೆ, ಆದ್ರೆ ಎಲ್ಲರಿಗೂ ಕವಿತೆ ಬರೆಯೋಕೆ ಬರೋದಿಲ್ಲ ಅಂತ ಹಿಂದೆ ಒಂದು ಹರಟೆ ಬರೆದಿದ್ದೆ. ಅದನ್ನು ಓದಬೇಕಾದರೆ ಇಲ್ಲಿ ಚಿಟಕಿಸಿ.