ಚಳಿಗಾಲದೊಂದು ಮುಂಬೆಳಗುಕೆಲವು ದಿನಗಳ ಹಿಂದೆ ನಮ್ಮ ಕೋಣೆಯಿಂದ ಕಂಡ ಈ ಬೆಳಗಿನ ನೋಟವನ್ನು ನನ್ನ ಹೆಂಡತಿ ಸೆರೆಹಿಡಿದಾಗ,  ಅದರ ಬಗ್ಗೆ ಬರೆದ ಒಂದು ಕುಸುಮ ಷಟ್ಪದಿ :

ಮಾರ್ಗಶಿರ ಕಳೆದಾಯ್ತು
ಚಿಗುರೆಲ್ಲ ಮರೆಯಾಯ್ತು
ಮುಗುಳುನಗೆ ಹೇಗಿಂದು ಕಂಡಿತಿಲ್ಲಿ?
ಆಗಸದಿ ಕುಣಿದಿಹುದು
ಹೊಂಗಿರಣ ನೇಸರನ
ಮುಗಿಲಿನಾ ಚಿತ್ತಾರ ರಂಗವಲ್ಲಿ!

-ಹಂಸಾನಂದಿ

ಚಿತ್ರ ಕೃಪೆ:  Poornima's Clicks

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ