ಬೇಡತಿಗೆರಡು ಕವಿತೆ


ಪಂಚಮಾತ್ರೆಯ ಚೌಪದಿಯಲ್ಲಿ:

ಭಿಲ್ಲರಾ ಹೆಣ್ಣೀಕೆ  ಬಾಣವನು ಹೂಡಲಿಕೆ
ಬಿಲ್ಲ  ಹಿಡಿಯುತ ಹೊಂಚಿಕಾಯ್ವಳೀಕೆ
ಸಲ್ಲದಿದು! ತನ್ನೆರಡು  ಕಣ್ಣಿನಾ ಕೂರಂಬಿ-
ನಲ್ಲೆ  ಕೊಲುವುದನೀಕೆ ಮರೆತಳೇಕೆ?


ಭಾಮಿನಿ ಷಟ್ಪದಿಯಲ್ಲಿ:

ಬೇಡ! ಚೆಲುವೆಯೆ ನಿನ್ನ ಕರದ-
ಲ್ಲಾಡುತಿಹ ಶರ ಭಯವ ತರುವುದು!
ಬೇಡತಿಯು ನಾನೆಂದು ಮಿಗಗಳ ಕೊಲ್ಲಬೇಕಿಲ್ಲ;   
ಕಾಡ ತೊರೆಯುತ ಹೊರಡು ಬೇಟೆಗೆ
ನಾಡ ಹೊಕ್ಕರೆ ಕಣ್ಣ ನೋಟದೆ
ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!

-ಹಂಸಾನಂದಿಕೊ: ಪದ್ಯಪಾನದಲ್ಲಿ ಈ ಪಕ್ಷಕ್ಕೆಂದು ಕೊಟ್ಟ ಚಿತ್ರದ ಮೇಲೆ ನನ್ನ ಎರಡು ಪ್ರಯತ್ನಗಳಿವು. ಚಿತ್ರ ಕೃಪೆ: ಪದ್ಯಪಾನ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ