ಬಂದಿದೆ ಚೈತ್ರ! ನಾಟಕ ಚೈತ್ರ!

ಚಿಗುರು ತುಂಬಿರೆ ಸುತ್ತ ಮುತ್ತಲು
ಮುಗುಳು ತುಂಬಿರೆ ಸಾಲುಮರ ಮ-
ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ
ನಗುವ ತಾರಲು ಮುದವ ತೋರಲು
ಸೊಗವ ತೋರುತ ಮನವನೊಮ್ಮೆಲೆ
ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!ಇನ್ನೂ ಫೆಬ್ರವರಿಯೇ ಕಳೆದಿಲ್ಲ ಈಗಲೇ ಅದೇನು ಚೈತ್ರ ಅಂದಿರಾ? ಇದಾಗಲೇ ಇಲ್ಲಿ ಸ್ಯಾನ್ ಹೋಸೆಯಲ್ಲಿ ಹೂವುಗಳು ಅರಳುತ್ತಿದ್ದು, ರಸ್ತೆಗಳನ್ನೆಲ್ಲ ಬಣ್ಣಗಳಿಂದ ತುಂಬುವ ಹಾಗೆ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ನಾಟಕ ಚೈತ್ರ ೨೦೧೦ ರಂತೆ, ಈ ಬಾರಿಯ ನಾಟಕ ಚೈತ್ರ ೨೦೧೨ರಲ್ಲಿಯೂ ಎರಡು ಕನ್ನಡ ನಾಟಕಗಳು - ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ಮತ್ತೆ ಬಿ ಆರ್ ಲಕ್ಷ್ಮಣ ರಾವ್ ಅವರ ನಂಗ್ಯಾಕೋ ಡೌಟು -  ಮುಂದಿನ ಭಾನುವಾರ ಮಾರ್ಚ್ ೪ ರಂದು ಇಲ್ಲಿಯ ರಂಗ ಮಂದಿರವೊಂದರಲ್ಲಿ  ಇಲ್ಲಿನ  ಕನ್ನಡ ನೋಡುಗರಿಗಾಗಿ ಪ್ರಯೋಗಗೊಳ್ಳುತ್ತಿವೆ. 

ವಿವರಗಳಿಗೆ ಈ ಕೆಳಗಿವೆ.  ನೀವು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿದ್ದರೆ, ತಪ್ಪಿಸಿಕೊಳ್ಳಲೇಬಾರದಂತಹ ಕಾರ್ಯಕ್ರಮ ಇದು ಅಂತ ಹೇಳಬೇಕಿಲ್ಲ! ಟಿಕೇಟ್ ಬೇಕಿದ್ದವರು ಇಲ್ಲಿ ಟಿಪ್ಪಣಿ ಹಾಕಿ ನನ್ನನ್ನು ಸಂಪರ್ಕಿಸಬಹುದು.


ಮರೀದೆ ಬರ್ತೀರಲ್ಲ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?