ಮನಮೋಹಕ ಅಲಾಸ್ಕಾ

ಕೆಲವು ದಿನಗಳ ಹಿಂದಿನ ನಮ್ಮ ಅಲಾಸ್ಕಾ ಪ್ರವಾಸದ ಚಿತ್ರಗಳು. ಎಲ್ಲವೂ ನನ್ನ ಸ್ಯಾಮ್ಸಂಗ್ ಕ್ಯಾಪ್ಟಿವೇಟ್ ಫೋನ್ ನ ಕ್ಯಾಮೆರಾದಲ್ಲಿ ತೆಗೆದವು.


ನಾವು ಹೊರಟೆವು ಅಲಾಸ್ಕಾಗೆ! 


ಅಲಾಸ್ಕಾದಲ್ಲಿ ಇರೋದರಲ್ಲಿ ಸುಮಾರು ೪೦% ಜನರೆಲ್ಲ ವಾಸ ಮಾಡೋದು ಏಂಕರೇಜ್ ನಲ್ಲೇ.  ನಾವು ಅಲ್ಲಿ ಸೇರಿದಾಗ ಸಮಯ ರಾತ್ರಿ ಹನ್ನೆರಡೂವರೆ. ಆಗ ತಾನೇ ಸೂರ್ಯ ಮುಳುಗಿದ್ದರಿಂದ, ಇನ್ನೂ ಮುಸ್ಸಂಜೆಯ ವಾತಾವರಣ.  ಸ್ವಲ್ಪ ಮೋಡ ಕವಿದಿತ್ತು.
ಏಂಕರೇಜ್ ನ ರೈಲ್ವೆ ನಿಲ್ದಾಣದ ಮುಂದೆ:


ರೈಲ್ವೆ ಸ್ಟೇಷನ್ನಿನ ಟಿಕೆಟ್ ಮಳಿಗೆ:


ವಿಟ್ಟಿಯರ್ ಗೆ ಹೋಗ್ತಾ,  ರೈಲಿನ ಕಿಟಕಿಯೊಳಗಿಂದ ಒಂದು ಒಳ್ಳೆ ನೋಟ:


ಕಾಣಿಸ್ತಿದೆಯಲ್ಲಪ್ಪ, ಮೊದಮೊದಲ ಹಿಮನದಿ (ಗ್ಲೇಶಿಯರ್)!


ವಿಟ್ಟಿಯರ್ ಬಂದಾಯ್ತು. ಇನ್ನೇನು ಹಡಗು ಹತ್ತಿ ಹೋಗೋದೇ:


ಬ್ಲ್ಯಾಕ್ ಸ್ಟೋನ್ ಬೇ ನಲ್ಲಿ ದೋಣಿ ಭರ್ರಂತ ಹೊರಟಿದೆ:


ಹೆಸರೇನೋ ಕಪ್ಪುಕಲ್ಲು ಕೊಲ್ಲಿ (Black Stone bay) ಅಂತ, ಆದ್ರೆ ನೀರು ಒಳ್ಳೇ ಪಚ್ಚೆ ಬಣ್ಣ!


ಅರರೆ! ಇಲ್ಲಿ  ನೀರಂತೂ ಅಚ್ಚ ನೀಲಿ ಬಣ್ಣಕ್ಕೆ ತಿರುಗಿದೆಯಲ್ಲಪ್ಪ!


ಹಿಮನದಿಯ ಹತ್ತಿರಕ್ಕೇ ಬಂದಾಯ್ತು! ತೇಲುತ್ತಿರುವ ಮಂಜುಗಡ್ಡೆಯ ತುಂಡುಗಳನ್ನ ನೋಡಿ:


ಹಿಮನದಿ ಕರಗಿ ನೀರಾಗಿ ಜಲಪಾತವಾಗುವ ಧಾರೆ:ಹಿಮನದಿಯಡಿಯಲಿ ಗುಹೆಯಿಂದ , ಹರಿದಿದೆ ನೀರು ಚೆಲುವಿಂದ ...


ಮರುದಿನ, ಮೂಸ್ ಪಾಸ್ ನಲ್ಲಿ ಮಾಡೋಣ ಸ್ವಲ್ಪ ಮೋಜು! ಒಂದೇ ಕೈಯಳತೆ, ಗ್ಲೇಸಿಯರ್ ಗೆ! ಪುಟಾಣಿ ವಿಮಾನದಲ್ಲಿ ಹಾರಾಟ:ಲೇಕ್ ಲುಯಿ ಲಾಡ್ಜ್ , ಗ್ಲೆನ್ ಹೆದ್ದಾರಿಯಿಂದ ಹದಿನಾರು ಮೈಲಿ ಒಳಗೆ:


ತೆಪ್ಪವನು ಹತ್ತೋಣ ಬನ್ನಿರೋ ..ದಾರೀಲೊಂದು ಅಲ್ಟ್ರಾ ಮಾಡರ್ನ್ ಗ್ಯಾಸ್ ಸ್ಟೇಷನ್ :)


ನಮ್ಮೂರಲ್ಲಿ ಹಿಂಗೇನಿಲ್ಲ್ಲ ದಾರೀಲೊಂದೂ ಗುಂಡಿ ಇಲ್ಲ ರಸ್ತೇನೋಡ್ಕೊಡೇ ಮೇಕಪ್ ಮಾಡ್ಕೋತಾರೇ...


 ರಿಚರ್ಡ್ಸನ್ ಹೆದ್ದಾರಿ

"ನಾರ್ತ್ ಪೋಲ್" ಗೆ ಐವತ್ತೈದೇ ಮೈಲಿ!ದೆನಾಲಿ ನ್ಯಾಶನಲ್ ಪಾರ್ಕ್ ಬಂತು:

ಕಾಂತಿಶ್ನಾ ಗೆ ಹೋಗೋಕೆ ಇರೋದೊಂದೇ ಬಸ್.. ಬೇಗ ಹತ್ಕೊಳ್ಳಿ .. ರೈ.....ಟ್


ಕಾಂತಿಶ್ನಾ ದಾರಿ  ಬಹುದೂರ .. ಬಸ್ಸಿನಲೂ ಬಲು ದೂರ ..


ಕೆಲವು ದಾರಿಯಲ್ಲಿ ಬಸ್ ಹೋಗೋಲ್ಲಪ್ಪ, ಅಲ್ಲಿಗೆ ಏಟೀವೀನೇ ಸರಿ!ಮೌಂಟ್ ದೆನಾಲಿ ಏಲಿಯಾಸ್ ಮೌಂಟ್ ಮೆಕ್ ಕಿನ್ಲಿ - ಉತ್ತರ ಅಮೆರಿಕದ ಅತಿ ಎತ್ತರ ಪರ್ವತ ಶಿಖರ - ೨೦೦೦೦ ಅಡಿಗಳಿಗೂ ಹೆಚ್ಚುಒಟ್ಟಿನಲ್ಲಿ ಅಲಾಸ್ಕ - ಮನಮೋಹಕ!


-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?