ಜೊತೆ

ಸುತ್ತ ಮುತ್ತಲು ಮಬ್ಬು ಕಂಡಿರ- ಲೆತ್ತ ಸಂತಸ ದಣಿದ ಮನಸಿಗೆ? ಚಿತ್ತವನು ನಲಿಸೀತೆ ಬಣ್ಣದ ಹಾಯಿರುವ ನಾವೆ? ಕುತ್ತು ಕಳವಳಗಳನು ತಾ ಮರೆ- ಸುತ್ತ ತುಂಬಲು ಹುರುಪು ಸಹಚರಿ ಮತ್ತೆ ಹಾಯೆನಿಸೀತು ಜೀವಕೆ ಕವಿದ ಮುಸುಕಿನಲು!

-ಹಂಸಾನಂದಿ

ಕೊ: ಈ ವಾರದ ಪದ್ಯಪಾನದಲ್ಲಿ ಕೊಟ್ಟಿದ್ದ ಚಿತ್ರಕ್ಕೊಂದು ಕವಿತೆ ಪ್ರಶ್ನೆಗೆ ನನ್ನ ಉತ್ತರ ಇದು. ಆ ಪುಟಕ್ಕೆ ಹೋದರೆ ಇದೇ ಚಿತ್ರಕ್ಕೆ ಹಲವು ಉತ್ತಮ ಉತ್ತರಗಳನ್ನು ಓದಬಹುದು!

ಕೊ.ಕೊ: ಈ ಚಿತ್ರ ಕೂಡ ಪದ್ಯಪಾನದಿಂದ ಲೇ ತೆಗೆದುಕೊಂಡದ್ದು. ಅಲ್ಲಿ ಕೂಡ ಕೃಪೆ- ಅಂತರ್ಜಾಲ ಅಂತಷ್ಟೇ ಹಾಕಿದ್ದಾರೆ. ಮೂಲ ಪುಟವನ್ನಿಲ್ಲಿ ನೋಡಬಹುದು (http://padyapaana.com/?p=1236)
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?