ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !


ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! 


ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.

ಕೆಳಗಿನ ಲೇಖನ ಇಂದಿನ (೮/೧/೨೦೧೨) ಗಿಜ಼್‍ಬಾಟ್ ಪೋರ್ಟಲ್ ನಲ್ಲಿ ಬಂದಿದೆ. ಅದರ ಕೊಂಡಿ - http://kannada.gizbot.com/news/kannada-1st-android-app-on-subhashita

ನಿಮ್ಮಲ್ಲಿ ಆನ್ಡ್ರೋಯ್ಡ್ ಫೋನ್/ಟ್ಯಾಬ್ಲೆಟ್ ಇದ್ದಲ್ಲಿ ಗೂಗಲ್ ಪ್ಲೇ ಇಂದ ಇಳಿಸಿಕೊಳ್ಳಬಹುದು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ, ಈ ರೀತಿಯ ಕೆಲಸ ಮಾಡುತ್ತಿರುವವರಿಗೆ, ಅದು ಖಂಡಿತ ಪ್ರೋತ್ಸಾಹಕಾರಿ.

-ಹಂಸಾನಂದಿ

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

 
Built to bring you the best of Google. Buy now for $199
hamsanaada
ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಬಗ್ಗೆ ಎಷ್ಟು ಹೆಮ್ಮೆ, ಆಭಿಮಾನವಿದೆಯೋ ಅಷ್ಟೇ ಗೌರವ ನಮಗೆ ಸಂಸ್ಕೃತದ ಬಗ್ಗೆಯೂ ಇದೆ. ಹಾಗಾಗಿ  ಅದರ ರಸಸ್ವಾದ ನಮ್ಮ ಜನರಿಗೂ ದಕ್ಕಲಿ ಎಂದೇ ಹಲವಾರು ಮಹನೀಯರು ಸಂಸೃತದಿಂದ ಕನ್ನಡಕ್ಕೆ ಬೃಹತ್ ಗ್ರಂಥಗಳಿಂದ ಹಿಡಿದು, ಭಗವದ್ಗೀತೆಯನ್ನೂ ಅನುವಾದಿಸಿ ಅದರ ರುಚಿಯನ್ನು ಉಣಬಡಿಸಿದ್ದಾರೆ.
ಈ ನಿಟ್ಟಿನಲ್ಲಿ ಹೊಸದೊಂದು ಪ್ರಯತ್ನ ನಡೆಸಿ ಸಂಸ್ಕೃತ ಸುಭಾಷಿತಗಳನ್ನು ಪದ್ಯಾನುವಾದ ಮಾಡಿರುವ ಹಂಸಾನಂದಿ ಕಾವ್ಯನಾಮಾಂಕಿತ ರಾಮಪ್ರಸಾದ್ ಕೆ ವಿ ರವರ ಖ್ಯಾತ ಪುಸ್ತಕ ಹಂಸನಾದ ದ ಆಂಡ್ರಾಯ್ಡ್ ಆಪ್ ಒಂದನ್ನು ಸಿದ್ದಪಡಿಸಿದೆ, ಸಾರಂಗ ಇನ್ಫೋಟೆಕ್.
ಆಕೃತಿ ಪ್ರಕಾಶನದ ಗುರುಪ್ರಸಾದ್ ಹೊರತಂದಿರುವ ಪುಸ್ತಕವನ್ನ ಸಾರಂಗ ಇನ್ಫೋಟೆಕ್ ಸಂಸ್ಥೆಯ ಹರಿಪ್ರಸಾದ್ ನಾಡಿಗ್ ಅವರು ಸಂಪದ ವೆಬ್ ತಾಣದ ಮೂಲಕ ಎಲ್ಲರಿಗೂ ಚಿರಪರಿಚಿತರು. ಈಗ ಈ ಪುಸ್ತಕದ ಆಂಡ್ರಾಯ್ಡ್ ಆಪ್ ಅನ್ನು ಹೊರತಂದಿದ್ದು, ಇದು ಪುಸ್ತಕವನ್ನು ಆಂಡ್ರಾಯ್ಡ್ ಆಪ್ ಆಗಿ ಮಾಡಿದ ಕನ್ನಡದ ಮೊದಲ ಸುಭಾಷಿತ ಆಪ್ ಆಗಿದೆ.
ಈ ಉಚಿತ ಆಪ್(App) ಮೂಲಕ ನೀವು ಪುಸ್ತಕದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಸುಭಾಷಿತಗಳನ್ನು ಕನ್ನಡದಲ್ಲಿ ಓದುವುದಷ್ಟೇ ಅಲ್ಲದೆ, ನಿಮ್ಮ ಸ್ನೇಹಿತರಿಗೆ ಫೇಸ್ ಬುಕ್ ಹಾಗು ಟ್ವಿಟರ್ ಮೂಲಕ ಶೇರ್ ಕೂಡ ಮಾಡಬಹುದಾಗಿದೆ. ವಿಶೇಷವೇನೆಂದರೆ ಇದನ್ನು ಯೂನಿಕೋಡ್ ಬೆಂಬಲವಿಲ್ಲದ ಸಾಧನಗಳಲ್ಲೂ ಓದಬಹುದಾಗಿದೆ.
ಇದನ್ನು ಅಭಿವೃದ್ಧಿಪಡಿಸಿದ ಸಾರಂಗ ಇನ್ಫೋಟೆಕ್ ನ ಹರಿಪ್ರಸಾದ್ ನಾಡಿಗ್ ಹಾಗು ಪುಸ್ತಕದ ಲೇಖಕ ಹಂಸಾನಂದಿ ರವರಿಗೆ ನಮ್ಮ ಅಭಿನಂದನೆಗಳು.
ಇದನ್ನು ಗೂಗಲ್ ಪ್ಲೇ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಇಲ್ಲಿ ಕ್ಲಿಕ್ ಮಾಡುವ ಮೂಲಕ.
Related Posts Plugin for WordPress, Blogger...

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?