ಕೇಳಬಾರದ್ದು


ಮೇಲ್ಮೆಯನು ಕೇಳು ನೀ ಚೆಲುವನಲ್ಲ
ನಡತೆಯೆಂಬುದ ಕೇಳು ಕುಲವನಲ್ಲ;
ಕೈಗೂಡಿಸಿದ ಕೇಳು ಕಲಿಕೆಯಲ್ಲ
ನಲಿವು ಪಡೆದುದ  ಕೇಳು ಗಳಿಕೆಯಲ್ಲ!

ಸಂಸ್ಕೃತ ಮೂಲ:

ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃಚ್ಛಸ್ವ ಮಾ ಧನಂ


-ಹಂಸಾನಂದಿ

ಕೊ: ಇವತ್ತು ತಾನೇ ಶತಾವಧಾನಿ ಗಣೇಶ್ ಅವರ ಉಪನ್ಯಾಸದಲ್ಲಿ ಕೇಳಿದ ಸುಭಾಷಿತವಿದು.Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ