ರಾಮನೇ ? ಇವ ಕಾಮನೇ? ಅಭಿರಾಮನೇ?


ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು -  ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು:



ರಾಮ ಹೊರಡಲು ಹರಧನುವಿನೆಡೆ ಶಿವನ ನುತಿಸುತ ಚೆಂದದಿಂ
ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ
ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸೀತೆಯು
ಹಾ! ಮನದಿನಿಯನೀಗ ಹೊರಟಿರೆ ಜೀವವುಳಿಯಿತುಯೆಂದಳು!

ರಾಮ ಹೊರಟಿರೆ ನಮಿಸಿ ಜನಕಗೆ ಹರನಚಾಪವನಿಟ್ಟೆಡೆ
ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ
ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸಜ್ಜನರ್ 
ರಾಮನೇ? ಇವ ಸೋಮನೇ! ಮನದಭಿರಾಮನೇ ಸರಿಯೆಂದರು!


-ಹಂಸಾನಂದಿ
ಕೊ: ಪದ್ಯಪಾನದಲ್ಲಿ ಈ ವಾರ ಸೀತಾ ಕಲ್ಯಾಣದ ಬಗ್ಗೆ ಬರೆಯುವ ಪ್ರಶ್ನೆ ಇತ್ತು - ಆ ಎಳೆಗೆಂದು ನಾನು ಬರೆದಿದ್ದರಲ್ಲಿ ಎರಡು ಪದ್ಯಗಳಿವು.

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ