ಲೆಮನ್ ಯೆಲ್ಲೋ, ರೆಡ್ ವೈನ್!

ಸಂಪದಿಗ ಗಣೇಶರು  ನಾನು ನೆನ್ನೆ ಬರೆದಿದ್ದ  ಬರಹ ಓದಿ  ಲೆಮನ್ , ಯೆಲ್ಲೋ ,ರೆಡ್ ,ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದುಕೇಳಿದರು ( http://sampada.net/comment/181604#comment-181604 )  ಅದಕ್ಕಾಗಿ  ಬರೆದ ಚೌಪದಿ  ಇದು:

 

(ಮಾಯಾ ಮೃಗದ ಸಂದರ್ಭ. ಗಂಡಸರ ಎಡಗಣ್ಣು, ಹೆಂಗಸರ ಬಲಗಣ್ಣು ಅದುರಿದರೆ ಅಶುಭ ಶಕುನವೆಂಬುದು ಕವಿಸಮಯ. ರಾಮಾಯಣದಲ್ಲಿ ಮಾರೀಚನನ್ನು ಹಿಡಿಯಲು ಹೋದಾಗ ರಾಮನಿಗೆ ಎಡಗಣ್ಣದುರಿದ ಕಥೆ ಇದೆಯೋ ಇಲ್ಲವೋ ಗೊತ್ತಿಲ್ಲ :-) ಅದು ನನ್ನ ಕಲ್ಪನೆ)

ಕಾನಲ್ಲಿ ಸೀತೆಯೆಲ್ಲೋ ನೀರು ತರುವಾಗ
ವೈನಾದ ಹೊನ್ನಜಿಂಕೆಯ ನೋಡಿ ಬಯಸೆ
ತಾನಲ್ಲೆ ಮನದನ್ನೆಯಾಸೆ ತೀರಿಸೆ ರಾಮ
ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ

-ಹಂಸಾನಂದಿ

ಕೊ. ರೆಡ್ ಪದ ಅಷ್ಟು ಚೆನ್ನಾಗಿ ಮೂಡಿ ಬಂದಿಲ್ಲವಾದರೂ ಹಾಕಿಬಿಟ್ಟೆ!

Image from http://www.indianetzone.com/photos_gallery/9/GoldenDeer_14328.jpg

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?