ಹಂಬಲದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ
ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ
ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ
ಮುಗುದ ಮೊಗದಾವರೆಯ ನಾಕಾಂಬೆನೆಂದು?


ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪):

ಅಶ್ರಾಂತಸ್ಮಿತಮರುಣಾಧರೋಷ್ಟಂ
ಹರ್ಷಾರ್ದ್ರದ್ವಿಗುಣ  ಮನೋಜ್ಞ ವೇಣುಗೀತಂ |
ವಿಭ್ರಾಮ್ಯದ್ವಿಪುಲ ವಿಲೋಚನಾರ್ಧಮುಗ್ಧಂ
ವೀಕ್ಷ್ಯತೇ ತವ ವದನಾಂಬುಜಂ ಕದಾ ನು ||

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ