ಕತ್ತೆಗೊಂದು ಪುಕ್ಕಟೆ ಸಲಹೆ

ಕತ್ತೆ! ಏತಕೆ ಬಟ್ಟೆ ಹೊತ್ತೊಣಗಿರುವ ಹುಲ್ಲನು ತಿನ್ನುವೆ?
ರಾಜಲಾಯಕೆ ಹೋಗಿ ಸುಮ್ಮನೆ ಕಡಲೆ ಉಸಳಿಯ ಮೆಲ್ಲು ನೀ!
"ಬಾಲವಿದ್ದುದು ಕುದುರೆ" ಯೆನ್ನುವ ಮಂದಿಯಾಳ್ವಿಕೆ ಅಲ್ಲಿದೆ ;
ಅವರು ನುಡಿದರೆ ರಾಜಗೊಪ್ಪಿಗೆ! ಇತರರಿರುವರು ತೆಪ್ಪಗೆ!

ಸಂಸ್ಕೃತ ಮೂಲ  (ಭಲ್ಲಟಶತಕದಿಂದ): 

ರೇ ರೇ ರಾಸಭ ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಂ ಪ್ರಯಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ
ಸರ್ವಾನ್ ಪುಚ್ಛವತೋ ಹಯಾನಿತಿ ವದಂತ್ಯತ್ರಾಧಿಕಾರೇ ಸ್ಥಿತಾ
ರಾಜಾ ತೈರುದ್ದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ
रे रे रासभ वस्त्रभारवहनात् कुग्रासमश्नासि किं 
राजाश्वावसथं प्रयाह्जि चणकभ्यूषान् सुखं भक्षय | 
सर्वान् पुच्छवतो हयानभिवदन्त्यत्राधिकारे स्थिताः 
राजा तैरुपदिष्टमेव मनुते सत्यं तटस्थाः परे ||

-ಹಂಸಾನಂದಿ


ಕೊ: ಸಂಸ್ಕೃತಮೂಲವು ಶಾರ್ದೂಲವಿಕ್ರೀಡಿತ ಎಂಬ ವೃತ್ತ ಛಂದಸ್ಸಿನಲ್ಲಿದೆ. ಅನುವಾದವು ಮಲ್ಲಿಕಾ ಮಾಲೆ (ಮತ್ತಕೋಕಿಲವೆಂದೂ ಹೆಸರಿದೆ) ಎಂಬ ವೃತ್ತದ ಧಾಟಿಯಲ್ಲಿದೆ.

ಕೊ.ಕೊ: ಹಲವು ವರ್ಷಗಳ ಹಿಂದೆ ಬೇರೊಂದು ಅನುವಾದ ಮಾಡಿದ್ದೆ - ಆದರೆ ಆಗ ಛಂದಸ್ಸಿನ ಮೇಲೆ ಗಮನವಿಟ್ಟಿರಲಿಲ್ಲ. ಅದನ್ನು ಇಲ್ಲಿ ಓದಬಹುದು.

ಚಿತ್ರ ಕೃಪೆ: http://www.vectorstock.com/royalty-free-vector/cartoon-of-donkey-for-coloring-vector-927188

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?