Posts

Showing posts from September, 2014

ಶರತ್ಕಾಲದ ಚಂದ್ರ

Image
ಹಬ್ಬವವು ಕಂಗಳಿಗೆ ಮನಕಸಿವ ತಂಗದಿರ- -ನುಲ್ಲಾಸ ತಂದೀವ ಕಿರಣಗಳ ಮಾಲೆ  ನಲ್ಲನಗಲಿಕೆಯೆಂಬ ವಿಷಬಾಣಕೀಡಾದ ಪೆಣ್ಗಳೊಡಲನು ಸುಟ್ಟು ಬಹಳ ಕಾಡಿಪುದೆ!ಸಂಸ್ಕೃತ ಮೂಲ - (ಕಾಳಿದಾಸನ ಋತುಸಂಹಾರ ಕಾವ್ಯ, ಸರ್ಗ ೩, ಪದ್ಯ ೯)
ನೇತ್ರೋತ್ಸವೋ ಹೃದಯಹಾರಿ ಮರೀಚಿಮಾಲಃ  ಪ್ರಲ್ಹಾದಕಃ ಶಿಶಿರಸೀಕರವಾರಿವರ್ಷೀಂ । ಪತ್ಯುರ್ವಿಯೋಗ ವಿಷದಿಗ್ಧ ಶರಕ್ಷತಾನಾಮ್  ಚಂದ್ರೋ ದಹತ್ಯತಿತರಾಂ ತನುಮಂಗನಾನಾಂ  ।।
नेत्रोत्सवो ह्दयहारिमरीचिमालः प्रल्हादकः शिशिरसीकरवारिवर्षीं पत्युर्वियॊगविषदिग्धशरक्षतानां चन्द्रो दहत्यतितरां तनुमङ्गनानाम् 
-ಹಂಸಾನಂದಿ  ಕೊ: ಈ ದಿನ, ಶರತ್ಕಾಲದ ಮೊದಲ ದಿನ, ಹಾಗಾಗಿ ಶರತ್ಕಾಲದ ಚಂದಿರನನ್ನು ಬಣ್ಣಿಸುವ ಈ ಪದ್ಯವನ್ನು ಆಯ್ದುಕೊಂಡೆ. ಈ ದಿನದ ಬಗ್ಗೆ ಹೆಚ್ಚು ಓದಬೇಕಾದರೆ ಇಲ್ಲಿ ಚಿಟಕಿಸಿ:  ಶರತ್ಕಾಲದ ಮೊದಲ ದಿನ 


ಕೊ.ಕೊ: ಋತುಸಂಹಾರವೆಂಬ ಖಂಡ ಕಾವ್ಯದಲ್ಲಿ ಕಾಳಿದಾಸನು ಆರೂ ಋತುಗಳನ್ನು ಬಣ್ಣಿಸುತ್ತಾನೆ. ಬೇಸಿಗೆ (ಗ್ರೀಷ್ಮ) ದಲ್ಲಿ ಆರಂಭವಾಗುವ  ಈ ಕಾವ್ಯ ಕೊನೆಗೆ ವಸಂತ ಕಾಲದ  ವರ್ಣನೆಯಲ್ಲಿ ಮುಗಿಯುತ್ತದೆ.  ಎಲ್ಲರಿಗೂ ಕಣ್ಣಿಗೆ ಹಬ್ಬವಾಗುವ ಚಂದಿರನ ತಂಪು ಕಿರಣಗಳು ವಿರಹಿಗಳಿಗೆ  ಕಷ್ಟವನ್ನೇ ತರುತ್ತವೆಂಬುದು ಮಹಾಕವಿ ಕಾಳಿದಾಸನೇ  ಹೇಳಿದ ಮೇಲೆ, ಇನ್ನೇನಿದೆ :) ? ಅಂದ ಹಾಗೆ ಋತುಸಂಹಾರವು ಕಾಳಿದಾಸನ ಮೊದಲ ಕಾವ್ಯವೆಂಬುದು ವಿದ್ವಾಂಸರ ಅಭಿಪ್ರಾಯ. 
ಕೊ.ಕೊ: ಅನುವಾದ ಪಂಚಮಾತ್ರಾ  ಚೌಪದಿಯ ರೂಪದಲ್ಲಿ…

ಕೊಟ್ಟು ಗೆದ್ದವಳು

Image
ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ
ತನ್ನೆಲ್ಲ ದುಗುಡವನು ಹೆತ್ತವರಿಗೆ
ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು
ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ

ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ 
ನೆನೆದಿಹಳು  ಮುಂಬರುವ ಬಿಡುಗಡೆಯನು; 
ಹೊಂದು ನೆಮ್ಮದಿಯನ್ನು!  ಬೆಸನದಗಲಿಕೆ ನೋವ-
ನವಳಾಗಲೇ ದೂರ ಕಳಿಸಿರುವಳು

ಸಂಸ್ಕೃತ ಮೂಲ ( ಅಮರು ಶತಕದಿಂದ - ವೇಮ ಭೂಪಾಲನ ಟೀಕೆ, ೮೭ನೆ ಪದ್ಯ ) :

ಅಚ್ಛಿನ್ನಂ ನಯನಾಂಬು ಬಂಧುಷು ಕೃತಂ ಚಿಂತಾ ಗುರುಷ್ವರ್ಪಿತಾ
ದತ್ತಂ ದೈನ್ಯಮಶೇಷತಃ ಪರಿಜನೇ ತಾಪಃ ಸಖೀಶ್ವಾಹಿತಃ
ಅದ್ಯ ಶ್ವಃ ಪರನಿರ್ವೃತಿಂ ಭಜತಿ ಸಾ ಶ್ವಾಸೈಃ ಪರಂ ಖಿದ್ಯತೇ 
ವಿಸ್ರಬ್ಧೋ ಭವ ವಿಪ್ರಯೋಗಜನಿತಂ ದುಃಖಂ ವಿಭಕ್ತಂ ತಯಾ ||

-ಹಂಸಾನಂದಿ 

ಕೊ: ತನ್ನ ಇನಿಯನಿಂದ ದೂರವಾಗಿದ್ದು ಕೊರಗುತ್ತಿರುವ ನಾಯಕಿಯ ಬಗ್ಗೆ ಒಬ್ಬ ಗೆಳತಿ ಇನ್ನೊಬ್ಬಳಿಗೆ ಹೇಳುತ್ತಿರುವ ಮಾತಿನಂತೆ ತೋರುತ್ತದೆ ಈ ಪದ್ಯ.

ಕೊ.ಕೊ: ನಾಯಕಿಯ ದುಃಖ ಅವಳಿಂದ ಅವಳ ಹತ್ತಿರದ ಹೆತ್ತವರು, ನೆಂಟರಿಷ್ಟರು, ಕೆಲಸದವರು, ಗೆಳೆಯರು ಎಲ್ಲರಿಗೂ ಸಾಂಕ್ರಾಮಿಕವೆಂಬಂತೆ ಹಬ್ಬಿ ಅವರೆಲ್ಲರೂ ಕೊರಗುತ್ತಿದ್ದಾರೆ. ಈಗ ನಾಯಕಿದೆ ಬದುಕಿರುವುದೇ ಭಾರವಾಗಿದೆ. ಇಂದೋ ನಾಳೆಯೋ ಉಸಿರುಡುಗಿ  ಹೋಗುವಂತಿದ್ದಾಳೆ ಆಕೆ. ಆದರೆ ತನ್ನೆಲ್ಲ ನೋವನ್ನು ಇತರರಿಗೆ ಹಂಚಿ ಜೀವವನ್ನೇ ತೊರೆಯಹೊರಟಿರುವುದರಿಂದ ಅವಳು ದುಃಖ ಮುಕ್ತಳು, ಅದ್ದರಿಂದ ಅವಳು ನೋವಲ್ಲಿರುವಳೆಂದು ಬೇಸರ ಪಡಬೇಡ ಎಂದು ಹೇಳುವುದರಿಂದಲೇ, ಅವಳ ವಿರಹ ವೇದನೆ ಎಷ್ಟು …

ಚಂದ್ರಮುಖಿಗೊಂದು ಮಾತು

Image
ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ   ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ   ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ!   

ಪ್ರಾಕೃತ ಮೂಲ ( ಹಾಲನ ಗಾಹಾ ಸತ್ತಸಯಿ, 7-7) :
ಗಮ್ಮಿಹಿಸಿ ತಸ್ಸ ಪಾಸಂ ಸುಂದರಿ ಮಾ ತುರಅ ವಡ್ಢಉ ಮಿಅಂಕೋ | ದುದ್ಧೇ ದುದ್ಧಂಇಅ ಚಂದಿಆಇ ಕೋ ಪೇಚ್ಛಇ ಮುಹಂ ದೇ ||
ಸಂಸ್ಕೃತ ಅನುವಾದ ( ನಿರ್ಣಯ ಸಾಗರ ಮುದ್ರಣಾಲಯದ ಟೀಕೆಯಿಂದ):
ಗಮಿಷ್ಯಸಿ ತಸ್ಯ ಪಾರ್ಶ್ವೇ ಸುಂದರಿ ಮಾ ತ್ವರಸ್ವ  ವರ್ಧತಾಂ ಮೃಗಾಂಕಃ । ದುಗ್ಧೇ ದುಗ್ಧಮಿವ ಚಂದ್ರಿಕಾಯಾಂ ಕಃ  ಪ್ರೇಕ್ಷತೇ ಮುಖಂ ತೇ ।।

ಚಿತ್ರ ಕೃಪೆ: "ಅಭಿಸಾರಿಕೆ"  http://www.artoflegendindia.com/abhisarika-p-19202.html ಈ ಪುಟದಿಂದ 
ಕೊ: ಮೂಲದ ಎರಡು ಸಾಲುಗಳನ್ನು ಅನುವಾದದಲ್ಲಿ ನಾಲ್ಕು ಸಾಲುಗಳಾಗಿ ಬೆಳೆಸಿದ್ದರಿಂದ, ತುಸು ಮೂಲದಲ್ಲಿಲ್ಲದ ಪದಗಳನ್ನು ಬಳಸಿದ್ದೇನೆ. ಆದರೂ ಭಾವಾರ್ಥ ತಪ್ಪಿಲ್ಲ ಎಂದು ಎಣಿಸಿದ್ದೇನೆ (ಉದಾಹರಣೆಗೆ, "ದೈವವಿರುವುದು ನಿನ್ನೆಡೆ " ಎಂಬ ಮಾತು 
ಕೊ.ಕೊ: ಅನುವಾದವು ಮಲ್ಲಿಕಾಮಾಲೆ ಎಂಬ ವೃತ್ತದ  ಚೌಪದಿಯ ಧಾಟಿಯಲ್ಲಿದೆ. ಪ್ರತಿ ಸಾಲಿನಲ್ಲೂ ೩/೪/೩/೪/೩/೪/೩/೩ ಈ ರೀತಿಯ ಗಣಗಳು ಬರುತ್ತವೆ. 
ಕೊ.ಕೊ.ಕೊ: ಅಭಿಸಾರವೆಂದರೆ ಬಳಿ ಹೋಗುವುದು. ಅಭಿಸಾರಿಕೆಯು ತನ್ನ ಇನಿಯನ ಜೊತೆಯನ್ನು ಬಯಸಿ ಹೋಗುತ್ತಿರುವ ಹೆಣ್ಣು.…

ಫೇಸ್ ಬುಕ್ ಪುಸ್ತಕ ಸವಾಲು : ನನ್ನ ಮೇಲೆ ಪ್ರಭಾವ ಬೀರಿದ ಹತ್ತು ಪುಸ್ತಕಗಳು

Image
ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು ಒಂದಷ್ಟು ದಿನ. ಒಟ್ಟಲ್ಲಿ ಏನೋ ಒಂದು ಒಳ್ಳೆ ಕೆಲಸ ಮಾಡ್ತಿದ್ದರಾಯ್ತು ಅಂತ ನಂಬಿದವನು ನಾನು. ಅಷ್ಟರಲ್ಲಿ ಇನ್ನೇನೋ ಫೇಸ್ ಬುಕ್ "ಬುಕ್ ಚಾಲೆಂಜ್" ಶುರುವಾಗಿದೆ ಈಗ ಕೆಲವು ದಿನಗಳಿಂದ. ನಮ್ಮ ಮೇಲೆ ಪರಿಣಾಮ ಬೀರಿದ ಹತ್ತು ಪುಸ್ತಕಗಳನ್ನು ಪಟ್ಟಿ ಮಾಡಿ, ಇನ್ನೊಬ್ಬರಿಗೆ ಖೋ ಕೊಡುವುದು ಈ ಸವಾಲಿನ ಗುರಿ.

ನನ್ನ ಇಬ್ಬರು ಮಿತ್ರರೂ ಈ ಚಾಲೆಂಜ್ ನನಗೆ ಹಾಕಿದ್ದರಿಂದ - ನಾನೂ ಪಟ್ಟಿ ಮಾಡೋಕೇ ಹೊರಟೆ. ಆಗಲೇ ಬರೀ ಪಟ್ಟಿ ಮಾಡೋಕಿಂತ ಆ ಪುಸ್ತಕ ಯಾಕೆ ನನ್ನ ಮೇಲೆ ಪರಿಣಾಮ ಬೀರಿತು ಅಂತ ಹೇಳಿದರೆ ಒಳ್ಳೇದು ಅಂತ ಅನ್ನಿಸಿ ಈ ಟಿಪ್ಪಣಿಯುಕ್ತ ಪಟ್ಟಿ ಬರೆದಿದ್ದಾಯಿತು.  ಈ ಪಟ್ಟಿಯಲ್ಲಿ ಕೆಲವು "ಒಂದು" ಪುಸ್ತಕವಲ್ಲ. ಹಾಗಿಲ್ಲದಿದ್ದರೂ ಪರವಾಗಿಲ್ಲ ಅಂತ ನನ್ನೆಣಿಕೆ.  ಓದಿ ನೋಡಿ. ಈ ಪಟ್ಟಿಯಲ್ಲಿ ನೀವು ಮೆಚ್ಚುವುದೆಷ್ಟಿದೆ ಅಂತ.1) ಕಸ್ತೂರಿ

ನನಗೆ ನೆನಪಿರೋವಾಗಿನಿಂದ ಓದೋದು ಅಂದರೆ ನನಗೆ ಬಹಳ ಇಷ್ಟವೇ. ಕೈಗೆ ಸಿಕ್ಕಿದ್ದನ್ನೆಲ್ಲ ಓದುತ್ತಿದ್ದೆ. ಮನೆಯಲ್ಲಿ ಕೆಲವು ಪುಸ್ತಕದ ಕಪಾಟುಗಳಿದ್ದವು. ಪಕ್ಕದಲ್ಲೇ ಇದ್ದ ಅಜ್ಜನ ಮನೆಯಲ್ಲಿ ಇನ್ನೊಂದಷ್ಟು ಕಪಾಟುಗಳು. ಅದೂ ಸಾಲದಿದ್ದರೆ …