ಉದುರೆಲೆಗಾಲ


ಬರಲು ಹೇಮಂತ ಋತು ಚುಮುಚುಮು
ಕೊರೆವ ಗಾಳಿಗೆ ನಡುಗಿರಲು ಧರೆ
ಕೊರಗುತಲಿ ಭೂತಾಯ ಮಕ್ಕಳು ಸಕಲ ತರುನಿಕರ
ಭರದಿ ತಮ್ಮೆಲೆಗಳನು ಕೆಂಪಿಗೆ
ತಿರುಗಿಸುತ ಕೆಳಗುದುರಿಸುತಲೀ
ತರಗು ಹೊದಿಕೆಯ ಹೊದಿಸಿಬಿಟ್ಟವು ಬಿಸುಪ ನೀಡಲಿಕೆ!

-ಹಂಸಾನಂದಿ


ಕೊ: ವರ್ಷೇ ವರ್ಷೇ ಚಳಿಗಾಲದಲ್ಲಿ ಎಲ್ಲ ಎಲೆಗಳನ್ನೂ ಉದುರಿಸುವ ಮರಗಳಿರುವ ಸ್ಥಳಗಳಿಗೆ ಒಪ್ಪುವ ಪದ್ಯವಿದು. ಕರ್ನಾಟಕದಂತಹ ಕಡೆ ಎಲೆಯುದುರಿಸುವ ಮರಗಳು ಕಡಿಮೆಯೇ.

ಕೊ.ಕೊ: ಪದ್ಯವು ಭಾಮಿನಿ ಷಟ್ಪದಿಯಲ್ಲಿದೆ.

ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?