ವಸುಂಧರೆಗೆಧರಣಿ ದೇವಿಯೆ ನಿನ್ನ ಮಕ್ಕಳ
ಮರೆತೆಯೇತಕೆ? ನಡುಕವೇತಕೆ?
ತೊರೆದೆಯೇನಿದು ನಿನ್ನ ಕರುಣೆಯ ಸಹಜ ಗುಣವನ್ನು?
ತೆರೆದೆಯೇಕೀ ಬಾಯಿ ತುಸುವೂ
ಮರುಕವಿಲ್ಲದೆ? ಹೊತ್ತಿಯುರಿದರೆ
ಧರೆಯು ನಿಲುವವರಾರು! ತಾಯೇ ಶಾಂತವಾಗಮ್ಮ!ಮೈಯ ಕೊಡವಿದೆಯೇಕೆ? ಸಾಸಿರ ಜೀವತೆಗೆದಿಹೆಯೇಕೆ ನೀ?
ತಾಯ ಬುದ್ಧಿಯ ಮರೆತೆಯೇತಕೆ? ತರವೆ ತರುವುದು ಸಂಕಟ?
ಮಾಯಗಾತಿಯೆ! ಬಲಿಯಕೊಂಡೆಯ ತಾಳ್ದು ಮಾರಿಯ ರೂಪವ?
ಸಾಯ ಬಿಡುತಲಿ ನಿನ್ನ ಮಕ್ಕಳನೆಂತು ನೆಮ್ಮದಿ ಹೊಂದುವೆ?

-ಹಂಸಾನಂದಿ

ಕೊ: ನೇಪಾಳದಲ್ಲಿ ಈಚೆಗೆ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ, ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ

ಕೊ.ಕೊ: ಮೊದಲ ಪದ್ಯವು ಭಾಮಿನಿ ಷಟ್ಪದಿಯಲ್ಲೂ, ಎರಡನೆಯದು ಮಾತ್ರಾ ಮಲ್ಲಿಕಾಮಾಲೆಯಲ್ಲೂ ನಿಬದ್ಧವಾಗಿವೆ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ