ನಾಟ್ಯ ಗುರುವಿಗೆ
"ಕುಡಿಹುಬ್ಬಿನಾ ಚೆಲುವೆ! ಬಳ್ಳಿದೋಳುಗಳನ್ನು ನೀಡು! ನಿಲುವಿರಲಿಯಿಂತು
ಬಗ್ಗುವಾಗಿಷ್ಟು ಕೈ ಚಾಚದಿರು, ಕಾಲ್ಬೆರಳು ಬಾಗಿರಲಿ, ನನ್ನ ನೋಡು!"
ಮೋಡ ಮೊರೆದಿರುವಂಥ ಕಂಠ ಮೃದಂಗದಲಿ ಪರಶಿವನು ನುಡಿಯುತಿರಲು
ಅವನ ನರ್ತನದ ಲಯ ಮುರಿವ ಚಪ್ಪಾಳೆ ಸದ್ದೆಮ್ಮನ್ನು ಕಾಯುತಿರಲಿ

ಸಂಸ್ಕೃತ ಮೂಲ:

ಏವಂ ಸ್ಥಾಪಯ ಸುಭ್ರು ಬಾಹುಲತಿಕಾಂ ಏವಂ ಕುರು ಸ್ಥಾನಕಂ
ನಾತ್ಯುಚ್ಚೈರ್ನಮ ಕುಂಚಯಾಗ್ರಚರಣೌ ಮಾಮ್ ಪಶ್ಯ ತಾವತ್ ಕ್ಷಣಮ್
ಏವಂ ನರ್ತಯತಃ ಸ್ವವಕ್ತ್ರಮುರಜೇನಾಂಬೋಧರಧ್ವಾನಿನಾ

ಶಂಭೋರ್ವಃ ಪರಿಪಾಂತು ನರ್ತಿತಲಯಚ್ಛೇದಾಹತಾಸ್ತಾಲಿಕಾ

ಕೊ: ಈ ಹಿಂದೆಯೇ ಈ ಪದ್ಯವನ್ನು ಅನುವಾದಿಸಿದ್ದೆ. ಆದರೆ ಇವತ್ತು " ನೃತ್ಯ ದಿನ" ಎಂದು ತಿಳಿಸುಬಂದದ್ದರಿಂದ ಈ ಬಾರಿ ಸ್ವಲ್ಪ ಛಂದಸ್ಸಿನ ಕಟ್ಟಿನಲ್ಲಿ ಅನುವಾದಿಸಿದ್ದೇನೆ.

ಕೊ.ಕೊ: ಮೂಲವು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರೆಯ ನಡಿಗೆಯಲ್ಲಿದೆ ( ಪೂರ್ತಿ ಚೌಪದಿ ಲಕ್ಷಣವನ್ನೂ, ಪ್ರಾಸವನ್ನೂ ಪಾಲಿಸಿಲ್ಲ)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?