ಹರನಿಗೊಂದು ಸ್ತುತಿಬಟ್ಟೆಬಿಟ್ಟವನೆಂದು ನಾಚಿಕೆ ಕಾಮವೈರಕೆ ನಸುನಗು
ನಂಜನುಂಡವನೆಂದು ಅಚ್ಚರಿ ಹಿಡಿದ ಬುರುಡೆಗೆ ನಡುಕವು 
ಗಂಗೆ ಮುಡಿಯೇರಿಸಿದ ಹರನನು ಕರುಬಿ ನೋಡುತ ಪಾರ್ವತಿ
ಹಾವು ಸುತ್ತಿರಲದಕೆ ಬೆದರಿರಲವನೆ ಕಾಯಲಿ ನಮ್ಮನು!

ಸಂಸ್ಕೃತ ಮೂಲ: (ವಿದ್ಯಾಕರನ ಸುಭಾಷಿತ ರತ್ನ ಕೋಶ ೪-೩೬, ವಿನಯದೇವನದೆಂದು ಹೇಳಲಾದ ಪದ್ಯ): 

ದಿಗ್ವಾಸಾ ಇತಿ ಸತ್ರಪಂ ಮನಸಿಜದ್ವೇಷೀತಿ ಮುಗ್ಧಸ್ಮಿತಂ
ಸಾಶ್ಚರ್ಯಂ ವಿಷಮೇಕ್ಷಣೋSಯಮಿತಿ ಚ ತ್ರಸ್ತಂ ಕಪಾಲೀತಿ ಚ
ಮೌಲಿಸ್ವೀಕೃತಜಾಹ್ನವೀಕ ಇತಿ ಚ ಪ್ರಾಪ್ತಾಭ್ಯಸೂಯಂ ಹರಃ
ಪಾರ್ವತ್ಯಾಸಭಯಂ ಭುಜಂಗವಲಯೀತ್ಯಾಲೋಕಿತಃ ಪಾತು ವಃ

दिग्वासा इति सत्रपं मनसिजद्वेषीति मुग्धस्मितं
साश्चर्यं विषमेक्षणोऽयमिति च त्रस्तं कपालीति च |
मौलिस्वीकृतजाह्नवीक इति च प्राप्ताभ्यसूयं हरः
पार्वत्या सभयं भुजङ्गवलयीत्यालोकितः पातु वः ||४. ३६||( ६५)

-ಹಂಸಾನಂದಿ

ಕೊ: ಬೇರೆ ಬೇರೆ ಕಾರಣಗಳಿಂದ ಪಾರ್ವತಿಯಲ್ಲಿ ನಾಚಿಕೆ, ಮಂದಸ್ಮಿತ, ಆಶ್ಚರ್ಯ, ನಡುಕ, ಅಸೂಯೆ, ಹೆದರಿಕೆ ಹೀಗೆ ಹಲವು ಬೇರೆಬೇರೆ ಭಾವನೆಗಳನ್ನು ತರುವ ಹರನು ನಮ್ಮಲ್ಲಿ ಕಾಪಾಡಲಿ ಎಂದು ಕವಿ ಕೋರುತ್ತಾನೆ. 

ಕೊ.ಕೊ: ಮೂಲವು ಶಾರ್ದೂಲ ವಿಕ್ರೀಡಿತವೆಂಬ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯೆಂಬ ಛಂದಸ್ಸಿನಲ್ಲಿದೆ. ಪ್ರಾಸವನ್ನು ಇಟ್ಟಿಲ್ಲ.

ಕೊ.ಕೊ.ಕೊ: ಚಿತ್ರವು ಎಲ್ಲೋರದ ಕೈಲಾಸ ದೇವಾಲಯದ ಗೋಡೆಯೊಂದರ ಮೇಲೆ ಕಾಣಬರುವ ಶಿವನ ಮೂರ್ತಿ.  ವಿಕಿಪೀಡಿಯಾ ಕೃಪೆ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ