ನಿರ್ಧಾರಕಣ್ಣದುರುತಲಿ ಬದಿಗೆ ತಿರುಗಲಿ ಗೆಳತಿ ಇನಿಯನು ಕಾಣಲು
ಜಾರಿ ಹೋದರು ಸೊಂಟದೊಡವೆಯು ಎದೆಯ ನಡುಕಕೆ ಕುಬುಸವು
ಸೀಳಿ ಹೋದರು ಮಾತನಾಡೆನು ಮೋಸಗಾರನ ಜೊತೆಯಲಿ
ಮೌನ ತಾಳದೆ ಎನ್ನ ಹೃದಯವೆ ಒಡನೆ ಒಡೆಯದೆ ಹೋದರೆ 

ಸಂಸ್ಕೃತ ಮೂಲ (ವಿದ್ಯಾಕರನ ಸುಭಾಷಿತ ರತ್ನಕೋಶ 636; ಇದು ಅಮರುಕನದ್ದೆಂದು ಅವನು ಹೇಳುತ್ತಾನೆ):

ವಲತು ತರಲಾ ದೃಷ್ಟಾ ದೃಷ್ಟಿಃ ಖಲಾ ಸಖಿ ಮೇಖಲಾ 
ಸ್ಖಲತು ಕುಚಯೋರುತ್ಕಂಪಾನ್ಮೇ ವಿದೀರ್ಯತು ಕಂಚುಕಮ್
ತದಪಿ ನ ಮಯಾ ಸಂಭಾಷ್ಯೋಸೌ ಪುನರ್ದಯಿತಃ ಶಠಃ
ಸ್ಫುರತಿ ಹೃದಯಂ ಮೌನೇನಾಂರರ್ನ ಮೇ ಯದಿ ತತ್ಕ್ಷಣಾತ್

वलतु तरला दृष्टा दृष्टिः खला सखि मेखला 
स्खलतु कुचयोः उत्कम्पान्मे विदीर्यतु कञ्चुकम् 
तदपि न मया सम्भाष्योऽसौ पुनर्दयितः शठः 
स्फुरति हृदयं मौनेनान्तर्न मे यदि तत्क्षणात्    

-ಹಂಸಾನಂದಿ


ಕೊ:ಚಲತು ತರಲಾ ಧೃಷ್ಟಾ ...  ತದಪಿ ನ ಮಯಾ ಸಂಭಾವ್ಯೋಸೌ ಸ್ಫುಟತಿ ಹೃದಯಂ ಮಾನಾನಾಂತ  ಎಂಬ ಪಾಠಾಂತರವೂ ಇದೆ , ಅರ್ಥದಲ್ಲಿ ಅಂತಹ ಬದಲಾವಣೆ ಆಗದು.

ಕೊ.ಕೊ. ಮೂಲವು ಹರಿಣೀ ವೃತ್ತದಲ್ಲಿದ್ದರೆ ಅನುವಾದವು ಮಾತ್ರಾ ಮಲ್ಲಿಕಾ ಮಾಲೆಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ. 

ಕೊ.ಕೊ.ಕೊ: ಕಾಫಿ ರಾಗವನ್ನು ಬಿಂಬಿಸುವ ರಾಗಮಾಲಾ ವರ್ಣಚಿತ್ರ http://ids.lib.harvard.edu/ids/view/43534021  ಇಲ್ಲಿಂದ ತೆಗೆದುಕೊಂಡದ್ದು

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?