ಕೊಳಲನೂದುವ ಚತುರನಿಗೆಇನಿಗೊಳಲಿನಿಂಪುದನಿ ಜೊತೆಯಲ್ಲೆಯೇ ನಿನ್ನ
ಸವಿನೋಟ ಬೀರುತಲಿ ಕರುಣಿಸೋ ನನ್ನ!
ನೀನು ಕೃಪೆ ತೋರಿರಲು ಇಹಪರಗಳಿಂದೇನು?
ನೀನು ಕೃಪ ತೋರದಿರೆ ಇಹಪರಗಳೇನು?

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ೧-೨೯) :

ಮಯಿ ಪ್ರಸಾದಮ್ ಮಧುರೈಃ ಕಟಾಕ್ಷೈಃ ವಂಶೀ ನಿನಾದಾನುನುಚರೈಃ ವಿಧೇಹಿ
ತ್ವಯಿ ಪ್ರಸನ್ನೇ ಕಿಮಿಹಾಪರೈರ್ನ್ನಃ ತ್ವಯ್ಯಪ್ರಸನ್ನೇ ಕಿಮಿಹಾಪರೈರ್ನ್ನಃ

मयि प्रसादम् मधुरैः कटाक्षैः वंशी निनादानुनुचरैः विधेहि
त्वयि प्रसन्ने किमिहापरैर्न्नः त्वय्यप्रसन्ने किमिहापरैर्न्नः


-ಹಂಸಾನಂದಿ

 ಕೊ:  ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ, ಪ್ರಾಸವನ್ನಿಟ್ಟಿಲ್ಲ.


ಕೊ.ಕೊ: ಈ ಅನುವಾದ ಮಾಡಲು ಸಹಾಯ ಮಾಡಿದ ಹಿರಿಯ ಮಿತ್ರ ಶ್ರೀ ಕೃಷ್ಣಪ್ರಿಯ ಅವರಿಗೆ ನಾನು ಆಭಾರಿ

ಕೊ.ಕೊ: ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಸುಪರಿಚಿತ ದೇವರನಾಮ.

ಚಿತ್ರ: ಬೆಳವಾಡಿ ದೇವಾಲಯ ಮುದ್ದು ಮುರಳೀ ಕೃಷ್ಣ, http://www.indyachalo.com/hoysala.html ಪುಟದಿಂದ ತೆಗೆದುಕೊಂಡದ್ದು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?