Skip to main content

Posts

Showing posts from February, 2016

ಸಂಗೀತ ಕಲಾನಿಧಿಗೊಂದು ನಮನ

ಇವತ್ತು ಫೆಬ್ರುವರಿ ೧೮, ೨೦೧೬. ಸಂಗೀತ ಕಲಾನಿಧಿ ಡಾ. ಆರ್. ಕೆ. ಶ್ರೀಕಂಠನ್ ಅವರು ದಿವಂಗತರಾಗಿ ಎರಡು ವರ್ಷವಾಗಿವೆ. ಆದರೆ ಅವರ ಸಂಗೀತದ ಕಂಪು ಇನ್ನೂ ಮಾಸಿಲ್ಲ, ಮಾಸುವುದೂ ಇಲ್ಲ.

ಒಂದು ಮಾಘದ ತಂಪಿರುಳಲಾ ನಂದದಲಿ ಸೇರಿರುವ ಸುರಗಣ ಚಂದದಲಿ ಕುಳಿತಿರಲು ಗಾಯನದಿಂಪ ಸವಿಯಲಿಕೆ ಇಂದದೇಕೋ ತನ್ನ ಹಾಡ ಲ್ಲೊಂದು ಸೊಗಸೂ ಕಾಣದೆಯೆ ಕರೆ- ತಂದ ನಾರದ ನಾಕದೊಳು ಕನ್ನಡದ ಕೋಗಿಲೆಯ!
1920 ರಲ್ಲಿ ಜನಿಸಿದ ಡಾ.ಶ್ರೀಕಂಠನ್ ಅವರರು ತಮ್ಮ 94 ವರ್ಷಗಳ ವಯಸ್ಸಿನಲ್ಲೂ, ತಮ್ಮ ಕೊನೆಯ ದಿನಗಳವರೆಗೆ ಸಂಗೀತ ಕಛೇರಿಗಳನ್ನು ಕೊಡುತ್ತಲೇ ಬಂದವರು. ಅವರು ಕಡೆಯವರೆಗೂ, ತಮ್ಮ ಕಂಠದ ಸೊಗಸನ್ನು ದಶಕಗಳ ಹಿಂದೆ ಹೇಗಿತ್ತೋ ಹಾಗೇ ಇಟ್ಟುಕೊಂಡದ್ದು ಸಂಗೀತಗಾರರೇ ಅಚ್ಚರಿ ಪಟ್ಟು ಮೆಚ್ಚಿದಂತಹ ವಿಷಯ. 
ಸಂಪ್ರದಾಯಬದ್ಧ ಸಂಗೀತವನ್ನು ಉಳಿಸಿಕೊಂಡು ಬಂದ 20ನೇ ಶತಮಾನದ ಸಂಗೀತಗಾರರಲ್ಲಿ ಶ್ರೀಕಂಠನ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಹಾಸನ ಜಿಲ್ಲೆಯ ರುದ್ರಪಟ್ಟಣದವರಾದ ಶ್ರೀಕಂಠನ್ ಅವರು ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿದದವರು. ಅತಿ ಶುದ್ಧವಾದ ಪಾಠಾಂತರ, ಉತ್ಕೃಷ್ಟ ಶೈಲಿಯ ಮನೋಧರ್ಮ ಮತ್ತೆ ಪ್ರತಿ ರಚನೆಯ ಹಾಡುಗಾರಿಕೆಯಲ್ಲೂ ಇರುವಂತಕ ಚೊಕ್ಕತನಕ್ಕೆ ಶ್ರೀಕಂಠನ್ ಅವರು ಕರ್ನಾಟಕ ಸಂಗೀತವಿರುವ ಕಡೆಯಲ್ಲೆಲ್ಲಾ ಬಹಳ ಹೆಸರುವಾಸಿ. ಸಂಗೀತವು ಯಾವಾಗಲೂ ಒಂದು ಚೌಕಟ್ಟಿನಲ್ಲಿದ್ದು, ಅದಕ್ಕೆ ತಕ್ಕ ಮನೋಧರ್ಮವಿದ್ದರೆ ಮಾತ್ರ ಸಂಗೀತವು ಕಳೆಕಟ್ಟುವುದೆನ್ನುವುದು ಅವರ …

ಱಳ? ಕುಳ? ಕ್ಷಳ ? - ಕನ್ನಡದ ಳ ಕಾರದ ಬಗ್ಗೆ ಸೇಡಿಯಾಪು ಅವರ ಬರಹ

ಇಂದು ಗೆಳೆಯರೊಂದಿಗೆ ಮಾತಾಡುತ್ತಿದ್ದಾಗ, ಱಳ ಕುಳ ಕ್ಷಳ ಗಳ ವಿಚಾರ ಬಂತು. ಈ ವಿಷಯದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಇದಮಿತ್ಥಂ ಎಂಬ ಬರಹವಿರುವಾಗ, ನಾವು ಅದಕ್ಕಿಂತ ಹೆಚ್ಚಿಗೆ ಏನು ತಾನೇ ಯೋಚಿಸಬಹುದೆನಿಸಿ, ಆ ಬರಹವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಇದು ಸೇಡಿಯಾಪು ಕೃಷ್ಣ ಭಟ್ಟರ ಸಮಗ್ರ ವೈಚಾರಿಕ ಬರಹಗಳ  ಪುಸ್ತಕ 'ಸೇಡಿಯಾಪು ವಿಚಾರ ಪ್ರಪಂಚ’ ದಲ್ಲಿದೆ. ಎಲ್ಲ ಕನ್ನಡ ನುಡಿಯ ಆಸಕ್ತರ ಓದಿಗೆಂದು ಹಂಚಿಕೊಳ್ಳುತ್ತಿರುವುದಷ್ಟೇ ಹೊರತು, ಯಾವ ಹಕ್ಕುಸ್ವಾಮ್ಯವನ್ನೂ ಮೀರುವ ಉದ್ದೇಶವಿಲ್ಲ.

ಈ ಪುಸ್ತಕ ಎಲ್ಲ ಕನ್ನಡ ಭಾಷಾಸಕ್ತರ ಕೈಯಲ್ಲಿರಬೇಕಾದ  ಪುಸ್ತಕ. ಸೇಡಿಯಾಪು ಅವರ ಪ್ರಬಂಧಗಳ ಹರಹು ಓದಿದರೇ ತಿಳಿಯುವಂತಹದ್ದು!

- ಹಂಸಾನಂದಿ