ಅಶೋಕ ವನದಲ್ಲಿ
ಬೇಸರಿಸದಿರು ತಾಯಿ ಜಾನಕಿ
ಲೇಸು ಗಮನವ ಹರಿಸು ಮೇಗಡೆ
ಕೂಸು ಹನುಮನ ಪದವ ಕೇಳೆಂದಿರಲು ಮಾರುತಿಯು
ಮಾಸು ಬಟ್ಟೆಯನುಟ್ಟ ಮೈಥಿಲಿ
ಯೋಸರಿಸಿ ತಲೆಯೆತ್ತೆ ಮನವು
-ಲ್ಲಾಸವೆನಿಸಲು ನಗುವು ಮೂಡಿತು ವಾನರನ ಕಂಡು

-ಹಂಸಾನಂದಿ

ಕೊ: ಈ ಬಾರಿ ಪದ್ಯಪಾನದಲ್ಲಿ ಕೊಟ್ಟಿದ್ದ ದತ್ತಪದಿ ( ’ಸರಿ’ , ’ಗಮ’, ’ಪದ’, ’ನಿಸ’ ಎಂಬ ಪದಗಳನ್ನು ಬಳಸಿ, ಸೀತೆಯ ಬಗ್ಗೆ ಯಾವುದಾದರೂ ಪದ್ಯ ಬರೆಯಬೇಕೆಂಬ) ಪ್ರಶ್ನೆಗೆ ನನ್ನ ಉತ್ತರವಿದು. ಈ ಉತ್ತರವು ಭಾಮಿನಿ ಷಟ್ಪದಿಯಲ್ಲಿದೆ.

ಕೊ.ಕೊ: ಕೊಟ್ಟ ಪದಗಳನ್ನು ಛಂದೋಬದ್ಧವಾಗಿ ಪದ್ಯದಲ್ಲಿ ಹೆಣೆಯುವುದಕ್ಕೆ ದತ್ತಪದಿ ಎಂದು ಹೆಸದು. ಕೆಲವೊಮ್ಮೆ ಇಂತಹದೇ ಛಂದಸ್ಸಿನಲ್ಲಿ ಬರೆಯಬೇಕೆಂಬ ನಿಯಮವೂ ಇರಬಹುದು.

ಕೊ.ಕೊ.ಕೊ: ಸಾಮಾನ್ಯವಾಗಿ, ಕೊಟ್ಟ ಪದಗಳು, ಒಂದು ಸಾಲಿನಲ್ಲಿ ಒಂದರಂತೆ, ಕೊಟ್ಟ ಕ್ರಮದಲ್ಲೇ ಮತ್ತು, ಆ ಪದಗಳ ನೇರ ಅರ್ಥವನ್ನು ಬಳಸದೇ ಬರಬೇಕೆಂಬುದು ರೂಢಿ.

ಚಿತ್ರ ಕೃಪೆ - ಅಂತರ್ಜಾಲ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?