ಅಚ್ಚರಿಯ ಭಂಡಾರ

ಅಚ್ಚರಿಯ ತರುವುದೀ ಸರಸತಿಯ ಭಂಡಾರ

ಎಲ್ಲಿಯೂ ಇರದಂಥ ಬಲುಹುಳ್ಳದು; 
ಬಳಸಿದಷ್ಟೂ ತಾನು ತುಂಬುತ್ತ ಹೋಗುವುದು
ಬಳಸದಿರೆ ಕುಗ್ಗಿ ಹೋಗುವುದು ನಶಿಸಿ!

ಸಂಸ್ಕೃತ ಮೂಲ:

अपूर्व:कोऽपि कोशोऽयं विद्यते तव भारति।
व्ययतो वृद्धिमायाति क्षयमायाति सञ्चयात् ।।

-ಹಂಸಾನಂದಿ

ಕೊ: ಅನುವಾದವು ಒಂದು ರೀತಿಯ ಭಾವಾನುವಾದವೆನ್ನಬಹುದು. ಮೂಲದಲ್ಲಿ ಬಳಸಿರುವದೇ ರೀತಿಯ ಪದಪ್ರಯೋಗಗಳನ್ನು ಉಳಿಸಿಕೊಂಡಿಲ್ಲ. 

ಕೊ.ಕೊ: ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದ್ದರೂ ಪ್ರಾಸವನ್ನಿಟ್ಟಿಲ್ಲ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ