Skip to main content

Posts

Showing posts from March, 2017

ದಿನಕ್ಕೊಂದು ನೆಪ!

ನೆನ್ನೆ ಅಂದರೆ ಮಾರ್ಚ್ ೨೦ (ಕೆಲವೊಮ್ಮೆ ಮಾರ್ಚ್ ೨೧ ರಂದೂ ಬರುತ್ತೆಅನ್ನಿ)  ವಸಂತದ ಮೊದಲ ದಿನ ಅಂತ ಲೆಕ್ಕ. ಅಂದರೆ, ಈಗ ನಾವು ಯಾವುದನ್ನ ಮೇಷಾದಿ ಬಿಂದು ಅಂತ ಆಕಾಶದಲ್ಲಿ ಕರೀತೀವೋ ಆ ಜಾಗದಲ್ಲಿ ಸೂರ್ಯ ಇರ್ತಾನೆ ಅಂತ. ಆದರೆ , ತಮಾಷಿ ಅಂದ್ರೆ ಈ ಬಿಂದು ಈಗ ಮೇಷ ರಾಶಿಯಲ್ಲಿ ಇಲ್ಲ , ಬದಲಿಗೆ ಮೀನ ರಾಶಿಯನ್ನೂ ದಾಟಿ ಹೆಚ್ಚು ಕಡಿಮೆ  ಕುಂಭರಾಶಿಗೆ ಸೇರಿ ಹೋಗಿದೆ. ಹೋಗಲಿ ಬಿಡಿ, ಈಗ ನಾನು ಹೇಳೋಕೆ ಹೊರಟಿದ್ದೇ ಬೇರೆ ವಿಷಯ.

ನಾವು ಚಿಕ್ಕವರಿದ್ದಾಗ ವರ್ಷದಲ್ಲಿ ಹನ್ನೆರಡು ತಿಂಗಳು, ಆರು ಋತುಗಳು ಮೂರು ಕಾಲಗಳು ಅಂತೆಲ್ಲ ಬಾಯಿಪಾಠ ಮಾಡಿದ್ದೇ ಮಾಡಿದ್ದು. ನಮ್ಮೂರಲ್ಲಿ ಮೂರು ಕಾಲಗಳಂತೂ ಕಾಣ್ತಿದ್ದವು,  ಆದರೆ ಋತುಗಳು? ವಸಂತ ? ಹೇಮಂತ?  ಶಿಶಿರ? ಹೂವು ಅರಳೋ ಕಾಲ? ಎಲೆ ಉದುರೋ ಕಾಲ?  ಹೂವುಗಳೇನೋ ಅರಳ್ತಿದ್ದವು ಹೆಚ್ಚು ಕಡಿಮೆ ವರ್ಷ ಪೂರ್ತಿ. ಇನ್ನು ಎಲೆ ಉದುರುತ್ತೆ ಅನ್ನೋದನ್ನ ಪುಸ್ತಕದಲ್ಲಿ ಓದಿ ತಿಳಿದಿದ್ದು ಅಷ್ಟೇ ಬಿಡಿ.

ಅದೇ ರೀತಿ ಆಗ ನಮಗೆ ಗೊತ್ತಿದ್ದದ್ದು ಮಕ್ಕಳ ದಿನಾಚರಣೆ ಒಂದೇ. ಆಮೇಲೆ, ಬೇರೆ ಬೇರೆ ದಿನಗಳ ಪರಿಚಯವಾಗ್ತಾ  ಹೋಯ್ತು.  ಅಪ್ಪನ ದಿನ, ಅಮ್ಮನ ದಿನ ಮೊದಲಾದುವುಗಳೆಲ್ಲ ಗ್ರೀಟಿಂಗ್ ಕಾರ್ಡ್ ಕಂಪನಿಗಳ ಲಾಭ ಹೆಚ್ಚಿಸೋಕೆ ಹೆಚ್ಚು ಹೆಚ್ಚು ಪ್ರಚಾರವಾಗ್ತಾ ಇದೆ ಅನ್ನುವ ಆರೋಪ ಇದ್ದೇ ಇದ್ದರೂ, ಪ್ರತಿ ದಿನವೂ ಅಪ್ಪನ ದಿನ, ಅಮ್ಮನ ದಿನ ಯಾಕಾಗಬಾರದು ಅಂತ ಪ್ರಶ್ನೆ ಕೇಳುವವರು ಹೆಚ್ಚೇ ಇದ್ದರೂ, ಹಾಗೊಂದು ದಿವಸ ಇದ್ರೆ…

ಪಸರಿಸಿತು ಮಧುಮಾಸ

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು 
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು 
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು 

( ಕುಮಾರವ್ಯಾಸ ಭಾರತ, ,  ಆದಿ ಪರ್ವ, ೫ ಸಂಧಿ, ೯ ಪದ್ಯ , ವಸಂತ ವರ್ಣನೆ)-ಹಂಸಾನಂದಿ